ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕನ್ನಡ ನಿರ್ಲಕ್ಷಿಸಿದರೆ ಆತ್ಮಹತ್ಯೆ ಮಾಡಿಕೊಂಡಂತೆ

Mainashree
Updated On : 1 Jun 2014, 10:59 am

1. ಮಲೆನಾಡಿನ ಕನ್ನಡ ಆತಂಕ ಯಾವ ರೀತಿಯದ್ದು, ಪರಿಹಾರವೇನು?
  - ಮಲೆನಾಡು, ಶಿವಮೊಗ್ಗ ಎಂದು ಕನ್ನಡಕ್ಕೆ ಪ್ರತ್ಯೇಕ ರೀತಿಯ ಆತಂಕಗಳಿಲ್ಲ. ಇಡೀ ಕರ್ನಾಟಕದಲ್ಲಿ ಕನ್ನಡ ಆತಂಕದ ಪರಿಸ್ಥಿತಿಯಲ್ಲಿದೆ. ಎಲ್ಲೆಲ್ಲೂ ಇಂಗ್ಲಿಷ್‌ಮಯವಾಗಿದೆ. ಕನ್ನಡ ಇಲ್ಲದೆಯೂ ಜೀವನ ನಡೆಸಬಹುದೆಂದು ಮಕ್ಕಳ ತಿಳಿವಳಿಕೆಗೆ ಬಂದಿದೆ. ನಮ್ಮದು ಅತಿ ಪ್ರಾಚೀನ ಭಾಷೆ. ಗ್ರೀಸ್, ಲ್ಯಾಟಿನ್ ಹೊರತುಪಡಿಸಿದರೆ ಅತಿ ಪ್ರಾಚೀನ. 8 ಜ್ಞಾನಪೀಠ ಪ್ರಶಸ್ತಿ ತಂದುಕೊಡುವಷ್ಟು ಶ್ರೀಮಂತ- ಪ್ರಾಚೀನ- ಪ್ರೌಢಭಾಷೆ. ಆದರೆ, ನಾವು ಆ ಹಿರಿಮೆಯನ್ನು ಉದಾಸೀನ ಮಾಡುತ್ತಿದ್ದೇವೆ. ಕನ್ನಡ ಭಾಷೆ ಬಗ್ಗೆ ಉದಾಸೀನ ಮಾಡಿದರೆ ಆತ್ಮಹತ್ಯೆ ಮಾಡಿಕೊಂಡಂತೆ. ಸರ್ಕಾರ ಆಲೋಚನೆ ಮಾಡಿ ಕನ್ನಡ ಉಳಿಸಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.
2. ಕನ್ನಡ ಉಳಿಸಲು ಪೋಷಕರ ಪಾತ್ರವೇನು?
  - ಕನ್ನಡ ಉಳಿಸಲು ಪೋಷಕರ ಪಾತ್ರ ಪ್ರಮುಖವಾದದ್ದು. ಶಾಲೆಗಳಲ್ಲಿ ಮಾಧ್ಯಮ, ಕನ್ನಡ ವಿಷಯ ಏನೇ ಇರಲಿ, ಮನೆಯಲ್ಲಿ ಮಕ್ಕಳಿಗೆ ಪೋಷಕರು ಕನ್ನಡದ ಬಗ್ಗೆ ಆಸಕ್ತಿ ಬರುವಂತೆ ನೋಡಿಕೊಳ್ಳಬೇಕು. ಕನ್ನಡವನ್ನು ಕಲಿಸಲು ವಿಶೇಷ ಪ್ರಯತ್ನ ಮಾಡಬೇಕು.
3. ಸಮ್ಮೇಳನದಲ್ಲಿ ನಿಮ್ಮ ದೃಷ್ಟಿಕೋನ ಹೇಗಿರುತ್ತದೆ?
  - ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ವಿಶೇಷತೆ ಕುರಿತು ಹೇಳುತ್ತೇನೆ, ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ನೆನಪು ಮಾಡಿಕೊಡುತ್ತೇನೆ. ಕರ್ನಾಟಕದ ಪ್ರಾಚೀನ ಪ್ರಾಚೀನ ರಾಜವಂಶವಾದ ಕದಂಬರು ಇಲ್ಲಿಂದ ಆಳಿದರು. ಅವರ ದೇವರ ಮಧುಕೇಶ್ವರ. ಮಧುಕೇಶ್ವರ ದೇವಸ್ಥಾನ ಇರುವುದು ಬನವಾಸಿಯಲ್ಲಿ ಎಂಬುದು ವಿಶೇಷ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ವಿಶೇಷತೆ, ಕರ್ನಾಟಕ- ಕನ್ನಡದ ವೈಶಿಷ್ಟ್ಯತೆ ಬಗ್ಗೆ ತಿಳಿಸುತ್ತೇನೆ.
4. ಕನ್ನಡದ ಉಳಿಸಬೇಕೆಂದು ಮನಸ್ಸುಗಳಿಗೆ ಏನು ಕರೆ ಕೊಡುತ್ತೀರಾ?
  - ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಸೂಕ್ತ ಕಾನೂನು ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣ ಆದಷ್ಟು ಕನ್ನಡದಲ್ಲಿ ಇರಬೇಕೆಂದು ಬಯಸಿ, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement