ತುಮಕೂರು

ಕಲೆ ಬಹುಮುಖ ಸಂಸ್ಕೃತಿ ಅಭಿವ್ಯಕ್ತಿ: ಮ.ಲ.ನ.ಮೂರ್ತಿ

ಕ.ಪ್ರ. ವಾರ್ತೆ ್ಣ  ಮಧುಗಿರಿ ್ಣ ಮಾ.29
ಕಲೆ ಬಹುಮುಖ ಸಂಸ್ಕೃತಿಯ ಅಭಿವ್ಯಕ್ತಿ, ಎಲ್ಲರ ನೋವು, ನಲಿವಿನ ಸ್ಪಂದನ ಎಂದು ಹಿರಿಯ ಸಾಹಿತಿ  ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಮಾಲೀ ಮರಿಯಪ್ಪ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರು ಯುವ ಕೇಂದ್ರ ತುಮಕೂರು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಧುಗಿರಿ ಉತ್ಸವ ಹಾಗೂ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಧುಗಿರಿ ಏಕಶಿಲಾ ಗಿರಿಯಿಂದ ವಿಶ್ವ ಪ್ರಸಿದ್ಧಿ ಪಡೆದಿದೆ. ಹಿಂದೆ  ಈ ಊರಿಗೆ ಪತೇಹಬಾದ್, ಮಾಧವಗಿರಿ ಎಂಬ ಹೆಸರಿತ್ತು. ಅನಂತರದಲ್ಲಿ ಮದ್ದಗಿರಿ ಎಂದು ಕರೆಯುತ್ತಿದ್ದರು. ಅಂದಿನ ಉಪವಿಭಾಗಾಧಿಕಾರಿ ಕನ್ನಡದ ಆಸ್ತಿ ಮಾಸ್ತಿ ಮದ್ದಗಿರಿಯನ್ನು  ಮಧುಗಿರಿ ಎಂದು ಮರು ನಾಮಕರಣ ಮಾಡಿ 80 ವರ್ಷಗಳಾದ ಈ ಸಂದರ್ಭದಲ್ಲಿ ಈ ಉತ್ಸವ ಔಚಿತ್ಯ ಪೂರ್ಣವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲೆ, ಸಂಸ್ಕೃತಿ, ಸಾಹಿತ್ಯದ ತವರೂರಾದ ಈ ಊರಿನ ಜನ ಸ್ವಾಭಿಮಾನದ ಸಂಕೇತವಾಗಿ ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕಲೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು  ಈ ಸಂದರ್ಭದಲ್ಲಿ ಒತ್ತಾಯಿಸಿದರು.
ತಾಲೂಕ ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಈ  ಬೆಟ್ಟವನ್ನು ಚಾರಣವಾಗಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್,ಪತ್ರಕರ್ತರಾದ ವೈ.ಸೋಮಶೇಖರ್, ಕೆ.ಎಸ್.ರಾಮಂಚಂದ್ರರಾವ್, ಪ್ರಸನ್ನ, ಕಾರ್ಯದರ್ಶಿ ನಟರಾಜು ಮತ್ತಿತರರು ಉಪಸ್ಥಿತರಿದ್ದರು.  
ವೇದಿಕೆ ಕಾರ್ಯಕ್ರಮದ ನಂತರ ಸುಗಮ ಸಂಗೀತ, ಡೋಲು ಕುಣಿತ, ತಮಟೆ ವಾದ್ಯ, ಕೃಷ್ಣಲೀಲೆ ಮತ್ತು ವರ್ಣಗಳ ಚಿತ್ತಾರ,ಅಕ್ಕಮಹಾದೇವಿ ನೃತ್ಯರೂಪಕ, ಮಧುಗಿರಿ ಲಾವಣಿ, ವೀರಗಾಸೆ, ಜಾನಪದ ನೃತ್ಯ, ಭರತ ನಾಟ್ಯ, ನಂದಿಕೋಲು ಕುಣಿತ ದಶವತಾರ ಹೀಗೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಜನ ಮೆಚ್ಚುಗೆ ಗಳಿಸಿದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು