ತುಮಕೂರು: ಬೋಧಿ ಮಂಡಲ ಹಾಗೂ ಸಹಜ ಪ್ರಕಾಶನದವರಿಂದ ಕುಚ್ಚಂಗಿ ಪ್ರಸನ್ನ ಅವರ ಇದು ಝೆನ್ ಅಲ್ಲ ಪುಸ್ತಕ ಕುರಿತ ಒಂದು ಮಾತುಕತೆ ಕಾರ್ಯಕ್ರಮವನ್ನು ಜು. 13 ರಂದು ಬೆಳಗ್ಗೆ 11 ರಿಂದ 1-30 ರವರೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ತುಮಕೂರಿನ ಬಿ.ಎಚ್. ರಸ್ತೆಯ ಪೃಥ್ವಿ ರೆಸ್ಟೋರೆಂಟ್ ಬಳಿಯಿರುವ ಓಶೋ ಮೆಡಿಟೇಷನ್ ಸೆಂಟರ್ನಲ್ಲಿ ಏರ್ಪಡಿಸಲಾಗಿದೆ. ಪುಸ್ತಕ ಕುರಿತು ಹೆಸರಾಂತ ಬೌದ್ಧ ಮೀಮಾಂಸಕ ಹಾಗೂ ವಿಮರ್ಶಕ ಡಾ. ಎಸ್. ನಟರಾಜ ಬೂದಾಳು ಮಾತನಾಡಲಿದ್ದಾರೆ. ನಂತರ ಜಾತಿಯಿಂದ ಬಿಡುಗಡೆ ಹೊಂದುವ ಹಾದಿಯಲ್ಲಿ ಬೌದ್ಧ ಧರ್ಮದೊಂದಿಗೆ ಒಂದು ಅನುಸಂಧಾನ ಕುರಿತು ಸಂವಾದ ಏರ್ಪಡಿಸಲಾಗಿದೆ. ತುಮಕೂರು ಬೋಧಿ ಮಂಡಲದ ಸಂಚಾಲಕ ಡಾ.ಎಚ್.ವಿ. ರಂಗಸ್ವಾಮಿ ಸಂವಾದದ ಆಶಯ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಅಂತಾರಾಷ್ಟ್ರೀಯ ಕಲಾವಿದ ಕೆ.ಟಿ. ಶಿವಪ್ರಸಾದ್ ಪಾಲ್ಗೊಳ್ಳಲ್ಲಿದ್ದಾರೆ. ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಹಾಗೂ ಹೈಕೋರ್ಟ್ ಸರ್ಕಾರಿ ವಕೀಲ ಎಚ್.ವಿ. ಮಂಜುನಾಥ್ ಸಂವಾದ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.