ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನಿವೃತ್ತ ಆರೋಗ್ಯ ಸಹಾಯಕಿಗೆ ಬೀಳ್ಕೋಡುಗೆ

Srinivasa Murthy VN
Updated On : 12 Aug 2013, 11:59 am

ಉಡುಪಿ: ಮೂಡುಬೆಳ್ಳೆ ಸಮೀಪದ ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿಯಾದ ಟಿ.ಎನ್. ಸುಜಾತ ಅವರಿಗೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
 ಉಡುಪಿ ತಾಲೂಕು ವೈದ್ಯಾಧಿಕಾರಿ ಡಾ. ನಾಗರತ್ನ, ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್ ಪ್ರಭು, ಕಾರ್ಕಳ ತಾಲೂಕು ವೈದ್ಯಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ಸಹಾಯಕಿ ಕೆ. ಗಿರಿಜ ಮತ್ತು ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಇದ್ದರು.

ಬೆಳಪು ಪ್ರೌಢಶಾಲೆಗೆ ರು. 51.96 ಲಕ್ಷ ಮಂಜೂರು
ಪಡುಬಿದ್ರಿ: ಇಲ್ಲಿನ ಬೆಳಪು ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ ಯೋಜನೆಯಡಿ 2012- 13ನೇ ಸಾಲಿನ ಅನುದಾನದಡಿ 51.96 ಲಕ್ಷ ಸರ್ವ ಶಿಕ್ಷಾ ಅಭಿಯಾನ ಇಲಾಖೆಯಿಂದ ಮಂಜೂರಾಗಿದೆ ಎಂದು ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಬೆಳಪು ಸಂಯುಕ್ತ ಪ್ರೌಢಶಾಲೆ ಸುಮಾರು 33 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಪ್ರಸಕ್ತ ವರ್ಷ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭಗೊಂಡಿದ್ದು, ಇದೀಗ ಮಂಜೂರಾದ ಅನುದಾನದಲ್ಲಿ 6 ನೂತನ ಕೊಠಡಿಗಳಲ್ಲಿ ವಾಚನಾಲಯ, ವಿಜ್ಞಾನ ಪ್ರಯೋಗಾಲಯ, ತರಗತಿ ಕೊಠಡಿ ಮತ್ತು ಸುಸಜ್ಜಿತ ಶೌಚಾಲಯಗಳ ನಿರ್ಮಾಣ ಕಾರ್ಯಗಳನ್ನು ಒಳಗೊಂಡಿದೆ. ಸರ್ವ ಶಿಕ್ಷಾ ಯೋಜನೆಯಡಿ 2 ಲಕ್ಷ ಅನುದಾನ ಅಡುಗೆ ಕೋಣೆಗೆ ಮಂಜೂರಾಗಿದ್ದು, ಈ ಎಲ್ಲ ಕಾಮಗಾರಿಗಳಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ ನೀಡಲಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಅಧ್ಯಾಪಕರಿಗೆ ತರಬೇತಿ ಕಾರ್ಯಕ್ರಮ
ಉಡುಪಿ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಅಧ್ಯಾಪಕರ ಬೋಧನಾ ಸಾಮರ್ಥ್ಯ ಬಲಗೊಳಿಸಲು ಮತ್ತು ತೀಕ್ಷ್ಣಗೊಳಿಸಲು ಇತ್ತೀಚಿಗೆ ಆಯೋಜಿಸಿದ 2 ದಿನಗಳ ಅಧ್ಯಾಪಕ ತರಬೇತಿ ಕಾರ್ಯಕ್ರಮವನ್ನು ಮಣಿಪಾಲ ಮಾಹಿತಿ ತಂತ್ರಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಹರಿಶ್ಚಂದ್ರ ಹೆಬ್ಬಾರ್ ಉದ್ಘಾಟಿಸಿದರು. ಸುರತ್ಕಲ್ ಎನ್.ಐ.ಟಿ.ಕೆ. ಸುರತ್ಕಲ್ ನಿರ್ದೇಶಕ ಪ್ರೊ. ಡಾ. ಸ್ವಪನ್ ಭಟ್ಟಾಚಾರ್ಯ, ಕೆ.ಎಂ.ಸಿ. ಮಣಿಪಾಲದ ಸಹಾಯಕ ಡೀನ್ ಡಾ. ಸುಧಾಕರ ನಾಯಕ್, ಮಣಿಪಾಲ ಎಮ್.ಐ.ಟಿ.ಯ ಪ್ರೊ. ಎಸ್.ಎನ್. ಭಟ್, ಸೋಮಶೇಖರ ಭಟ್ ಮುಂತಾದ ಕ್ಷೇತ್ರ ಶಿಕ್ಷಣ ತಜ್ಞರು ಅಧ್ಯಾಪನದ ಕಲೆ ಮತ್ತು ವಿಜ್ಞಾನ ವಿಷಯ, ಅಧ್ಯಾಪಕನ ವೃತ್ತಿ ಜೀವನದ ವಿವಿಧ ಸ್ತರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ರತ್ನಕುಮಾರ್, ಉಪಪ್ರಾಂಶುಪಾಲ ಎ. ಗಣೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement