ಅತ್ಯಾಚಾರಕ್ಕೊಳಗಾಗಿದ್ದ ವೈದ್ಯ ವಿದ್ಯಾರ್ಥಿನಿ ಆಸ್ಪತ್ರೆಯಿಂದ ಬಿಡುಗಡೆ
ಉಡುಪಿ: ಮಣಿಪಾಲದಲ್ಲಿ ಜೂ.20ರಂದು ಮಧ್ಯರಾತ್ರಿ ಮೂರು ಮಂದಿ ಆಟೋ ಚಾಲಕರಿಂದ ಅಪಹರಣಗೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಣಿಪಾಲ ವಿ.ವಿ. ವೈದ್ಯಕೀಯ ವಿದ್ಯಾರ್ಥಿನಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅತ್ಯಾಚಾರ ಸಂದರ್ಭ ಕಾಲು ಮುರಿತವಾಗಿದ್ದ ಈಕೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಇದೀಗ ಈಕೆ ದೈಹಿಕ, ಮಾನಸಿಕವಾಗಿ ಚೇತರಿಸಿಕೊಂಡಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತನ ಹೆತ್ತವರೊಂದಿಗೆ ಕೇರಳದ ತನ ಮನೆಗೆ ಹೋಗಿದ್ದಾಳೆ. ಕೇರಳ ಮೂಲದ ಈಕೆ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ 4ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.