ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಗಣೇಶ್ ಕುಲಾಲ್ ಆಯ್ಕೆ

Srinivasa Murthy VN
Updated On : 14 May 2013, 1:18 am

ಬಂಟ್ವಾಳ: ಫ್ರೆಂಡ್ಸ್ ಕ್ರಿಕೆಟರ್ಸ್ ದೇವರಕಟ್ಟೆ ಬಂಟ್ವಾಳ ಇದರ 2013- 14ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಗಣೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಬಂಟ್ವಾಳ ಶ್ರೀ ಯಶವಂತ ವ್ಯಾಯಾಮ ಶಾಲೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಳಿದಂತೆ ಪದಾಧಿಕಾರಿಗಳಾಗಿ ದಿನೇಶ್ ಭಂಡಾರಿ(ಪ್ರಧಾನ ಕಾರ್ಯದಶರ್),  ಮಹೇಶ್ ನೈಕ್(ಕೋಶಾಧಿಕಾರಿ), ಭಾಸ್ಕರ ಭಂಡಾರಿ(ಜತೆ ಕಾರ್ಯದರ್ಶಿ), ಸಂತೋಷ್ ದೇವಾಡಿಗ (ಕ್ರೀಡಾ ಕಾರ್ಯದರ್ಶಿ) ಆಯ್ಕೆಗೊಂಡಿದ್ದಾರೆ. ಹಾಗೂ 13 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.

ಇಂದು, ನಾಳೆಶ್ರೀ ಧರ್ಮಶಾಸ್ತಾ ಪ್ರತಿಷ್ಠಾ ಮಹೋತ್ಸವ
ಮಂಗಳೂರು: ಜಪ್ಪಿನಮೊಗರು ಶ್ರೀ ಧರ್ಮಶಾಸ್ತಾ ಭಕ್ತ ವೃಂದ ವತಿಯಿಂದ ಮೇ 14 ಮತ್ತು 15ರಂದು ಶ್ರೀ ಧರ್ಮಶಾಸ್ತಾ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಜಪ್ಪಿನಮೊಗರು ಪ್ರದೇಶದ 27 ಸೆಂಟ್ಸ್ ವ್ಯಾಪ್ತಿಯಲ್ಲಿ, ರು. 85ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದು ಅಯ್ಯಪ್ಪ ಭಕ್ತ ವೃಂದದ ಕೊಡುಗೆಯಾಗಿದೆ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಎ. ಚಂದ್ರನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 14 ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ಧರ್ಮಶಾಸ್ತಾ ಭಕ್ತ ವೃಂದದ ಶ್ರೀ ರವೀಂದ್ರ ಗುರುಸ್ವಾಮಿ ಉದ್ಘಾಟಿಸುವರು. ಪಡೀಲ್ ಕೊಟ್ಟಾರಿ ಸಮಾಜ ಸುಧಾಕರ ಸಂಘದ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸುವರು ಎಂದರು. 15 ರಂದು ಬೆಳಗ್ಗೆ 10.30ಕ್ಕೆ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಅಭಿಷೇಕ, ಅಲಂಕಾರ ಪೂಜೆ ನಡೆಯಲಿದೆ. ಸಂಜೆ 6ಕ್ಕೆ 'ಆಯೆ ಬರೆತಿಜೆ' ಸಾಮಾಜಿಕ ಹಾಸ್ಯ ನಾಟಕ ನಡೆಯಲಿದೆ ಎಂದರು.


ಸತ್ಯನಾರಾಯಣ ಪೂಜೆ
ಮೂಲ್ಕಿ: ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಅಂಗರಗುಡ್ಡೆಯ ರಾಮ ಭಜನಾ ಮಂದಿರದಲ್ಲಿ ರಾಮ ಭಜನಾ ಮಂಡಳಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement