ಪರ್ಕಳ: ಝಕಾರಿಯಾಗೆ ಬೀಳ್ಕೊಡುಗೆ
ಪರ್ಕಳ: ಸಿಂಡಿಕೇಟ್ ಬ್ಯಾಂಕ್ ಪರ್ಕಳ ಶಾಖೆಯ ಹಿರಿಯ ಪ್ರಬಂಧಕ ಝಕಾರಿಯಾ ಪಿ.ಎಸ್. ಅವರು ತಿರುವನಂತಪುರಕ್ಕೆ ವರ್ಗಾವಣೆ ಹೊಂದಿರುವುದರಿಂದ ಅವರಿಗೆ ಸಾರ್ವಜನಿಕರ ನೆಲೆಯಲ್ಲಿ ಪರ್ಕಳ ಪ್ರೌಢಶಾಲೆಯಲ್ಲಿ ವಿದಾಯ ಕೋರಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ಶ್ರೀನಿವಾಸ ಉಪಾಧ್ಯ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಎಂ. ಮಂಜುನಾಥ ಉಪಾಧ್ಯ ಸನ್ಮಾನಿತರನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿರುವ ಗಣ್ಯರು ಝಕಾರಿಯಾ ದಂಪತಿಗೆ ಶಾಲು ಹೊದಿಸಿ ಗೌರವಿಸಿದರು.
ಕೆ. ಜಯರಾಮ ಆಚಾರ್ಯ, ಆರ್.ಎಲ್. ಡಯಾಸ್, ಹಾಜಿ ಕೆ. ಅಬೂಬಕ್ಕರ್, ಬಿ.ಎಚ್. ಸೆಟ್ಟಿಗಾರ್, ಬಿ. ವಾಸು ಪ್ರಭು ಹಾಗೂ ಶ್ರೀಪತಿ ತಂತ್ರಿ ಶುಭಾಶಂಸನೆಗೈದರು. ರೋಟರಿ ಅಧ್ಯಕ್ಷ ಗಣೇಶ ಪಾಟೀಲ್ ವಂದಿಸಿದರು. ಬಿ. ಅನಂತರಾಮ ಭಟ್ ನಿರೂಪಿಸಿದರು.
ಸಮಾರಂಭದಲ್ಲಿ ಲೀನಾ ಮ್ಯಾಥ್ಯೂ, ಎಸ್.ಎನ್. ನಾಯಕ್, ಸೂರ್ಯ ಕುಮಾರ್, ನಿವೃತ್ತ ಹಿರಿಯ ಪ್ರಬಂಧಕ ಕೆ.ಪಿ. ಕಿಣಿ, ಕೆ.ಸಿ. ಪ್ರಭು ಇದ್ದರು.
ಸಿದ್ದು ಪ್ರಮಾಣ ವಚನ: ಉಪ್ಪಿನಂಗಡಿ, ಕೈಲ, ಆತೂರಿನಲ್ಲಿ ವಿಜಯೋತ್ಸವ
ಉಪ್ಪಿನಂಗಡಿ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿ, ರಾಜ್ಯದ 22ನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿ, ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ, ಆತೂರು, ಕೈಲ ಮೊದಲಾದ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ, ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ವಿಜಯೋತ್ಸವ ಆಚರಿಸಿದರು.
'ಸುಭದ್ರಾ ಕಲ್ಯಾಣ'
ಕೋಟದ ಹಂದೆ ದೇವಸ್ಥಾನ ರಥೋತ್ಸವ ಸಂದರ್ಭ ಬೆಂಗಳೂರಿನ ಯಕ್ಷಾದೇಗುಲ ತಂಡದ 'ಸುಭದ್ರಾ ಕಲ್ಯಾಣ' ಯಕ್ಷಗಾನದಲ್ಲಿ ಕೃಷ್ಣ- ಸುಜಯೀಂದ್ರ ಹಂದೆ, ಸತ್ಯಭಾಮೆ- ಗಣಪತಿ ಹೆಗಡೆ, ಬಲರಾಮ- ತಮ್ಮಣ್ಣ ಗಾಂವ್ಕರ್, ಸುಭದ್ರೆ- ರವಿ ಹಕ್ಲಾಡಿ, ಯತಿಅರ್ಚನ- ರಾಜಶೇಖರ ಹಂದೆ ಅಭಿನಯಿಸಿದ್ದರು.