ನದಿ ತಿರುವಿನ ಬಾಧಕಗಳ ಕುರಿತು ವಿಧಾನಸಭೆಯಲ್ಲಿ ಮಾಹಿತಿ: ಬಂಗೇರ
ಬೆಳ್ತಂಗಡಿ: ನೇತ್ರಾವತಿ ನದಿ ತಿರುವಿನ ಬಾಧಕಗಳ ಬಗ್ಗೆ ವಿಧಾನಸಭೆಯ ಎಲ್ಲ ಶಾಸಕರಿಗೆ ಜಲತಜ್ಞ ಶ್ರೀಪಡ್ರೆ ಮೂಲಕ ಮನವರಿಕೆ ಮಾಡಿಕೊಡಲಾಗುವುದು ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದ್ದಾರೆ.
ಸೋಮವಾರ ಬೆಳ್ತಂಗಡಿಯಲ್ಲಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ವತಿಯಿಂದ ನೇತ್ರಾವತಿ ನದಿ ಮತ್ತು ಉಪನದಿ ಎತ್ತಿನಹೊಳೆ ತಿರುವು ಯೋಜನೆ ವಿರುದ್ಧ ಬೃಹತ್ ಪ್ರತಿಭಟನಾ ಜಾಥಾ ಮತ್ತು ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ನೇತ್ರಾವತಿ ನದಿ ತಿರುವಿನ ಬಗ್ಗೆ ಹಾಗೂ ಬರ ಪೀಡಿತ ಪ್ರದೇ ಶಗಳಲ್ಲಿ ಪರ್ಯಾಯ ನೀರಿನ ಯೋಜನೆಗಳ ಬಗ್ಗೆ ಶ್ರೀ ಪಡ್ರೆಯವರಿಗೆ ಸಮಗ್ರ ಮಾಹಿತಿ ಇದ್ದು, ಅವರಿಂದ ವಿಧಾನಸಭೆಯಲ್ಲಿ ಸಚಿತ್ರವಾಗಿ ಮಾಹಿತಿ ನೀಡುವ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚಿಸುತ್ತೇನೆ ಎಂದರು.
ವೈಜ್ಞಾನಿಕ ಅರಿವು ಅಗತ್ಯ: ಹಿರಿಯ ಪತ್ರಕರ್ತ ಜಲತಜ್ಞ ಶ್ರೀಪಡ್ರೆ ಮಾತನಾಡಿ, ಈ ಯೋಜನೆಯಿಂದ ನಮಗೂ ನೀರಿಲ್ಲ, ಘಟ್ಟ ಪ್ರದೇಶದವರಿಗೂ ನೀರಿಲ್ಲದಂಥ ಸ್ಥಿತಿ ನಿರ್ಮಾಣವಾಗಲಿದೆ. ಯೋಜನೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವುದಕ್ಕಿಂತ ವೈಜ್ಞಾನಿಕ ಅರಿವು ಮುಖ್ಯ. ಮಳೆಯ ನೀರನ್ನು ಸಂಗ್ರಹಿಸುವ ಕಾರ್ಯ ಆಗಬೇಕು. ನೇತ್ರಾವತಿ ನದಿ ತಿರುವು ಯೋಜನೆ ಎಂಜಿನಿಯರ್‌ಗಳ ಕನಸಾಗಿದೆ ಅಷ್ಟೆ ಎಂದರು.
ನಿರ್ಣಯಗಳು: ಪಶ್ಚಿಮಘಟ್ಟ ನಾಶಗೊಳಿಸುವ, ಕರಾವಳಿಯ ಜನರ ಬದುಕನ್ನು ಅಸ್ತವ್ಯಸ್ತಗೊಳಿಸಲಿರುವ ಎತ್ತಿನಹೊಳೆ ಯೋಜನೆ ಕೈಬಿಡಬೇಕು. ಯೋಜನೆಯಿಂದಗುವ ಪರಿಣಾಮಗಳ ಬಗ್ಗೆ ಕೂಡಲೆ ಅಧ್ಯಯನ ನಡೆಸಬೇಕು