ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ತೆರಿಗೆ ಸಂಗ್ರಹ: ಕರ್ನಾಟಕ- ಗೋವಾ ವಿಭಾಗಕ್ಕೆ 3ನೇ ಸ್ಥಾನ

Srinivasa Murthy VN
Updated On : 25 Oct 2013, 12:59 pm

ಉಡುಪಿ: ಮುಂದಿನ 5 ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ- ಗೋವಾ ವಿಭಾಗ ದೇಶದಲ್ಲಿಯೇ 2ನೇ ಸ್ಥಾನಕ್ಕೇರಲಿದೆ ಎಂದು ವಿಭಾಗದ ಮುಖ್ಯ ಆಯುಕ್ತ ಕೆ. ಸತ್ಯನಾರಾಯಣ ತಿಳಿಸಿದರು.
ಅವರು ಗುರುವಾರ ಉಡುಪಿ ಆದಾಯ ತೆರಿಗೆ ಇಲಾಖೆಯ ಆಯುಕ್ತರ ಸೇವಾ ಕೇಂದ್ರ ಮತ್ತು ಅತಿಥಿಗೃಹ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಪ್ರಸ್ತುತ ಮಹಾರಾಷ್ಟ್ರ ವಿಭಾಗ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ವಿಭಾಗವು 2ನೇ ಸ್ಥಾನದಲ್ಲಿದೆ. ಕರ್ನಾಟಕ- ಗೋವಾ ವಿಭಾಗವು 3ನೇ ಸ್ಥಾನದಲ್ಲಿದೆ. 2012- 13ನೇ ಸಾಲಿನಲ್ಲಿ ಕರ್ನಾಟಕ- ಗೋವಾವು 51,150 ಕೋಟಿ ಆದಾಯ ತೆರಿಗೆ ಸಂಗ್ರಹಿಸಿತ್ತು, 13-14ನೇ ಸಾಲಿಗೆ 60,840 ಕೋಟಿ ಆದಾಯ ತೆರಿಗೆ ಸಂಗ್ರಹದ ಗುರಿ ಇದೆ. ಅದರಲ್ಲಿ ಮೊದಲ ಮೂರು ತಿಂಗಳಲ್ಲಿಯೇ 21,700 ಕೋಟಿ ಸಂಗ್ರಹವಾಗಿದೆ. ಇದೇ ವೇಗ ಮತ್ತು ಸಾಮರ್ಥ್ಯದೊಂದಿಗೆ ವಿಭಾಗವು ಕೆಲಸ ಮಾಡಿದರೆ 5 ವರ್ಷಗಳಲ್ಲಿ ದೇಶದಲ್ಲಿಯೇ 2ನೇ ಸ್ಥಾನ ಪಡೆಯಲಿದೆ ಎಂದವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕಾರ್ಪೋರೇಷನ್ ಬ್ಯಾಂಕ್‌ನ ಅಧ್ಯಕ್ಷ ಎಸ್.ಆರ್. ಬನ್ಸಾಲ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement