ಉಡುಪಿಯಲ್ಲಿ ನ.23ರಿಂದ ರಾಜ್ಯಮಟ್ಟದ ನಾಟಕ ಸ್ಪರ್ಧೆ
ಉಡುಪಿ: ಇಲ್ಲಿನ ನಾಟಕ ಸಂಸ್ಥೆ 'ರಂಗಭೂಮಿ'ಯು ನ.23ರಿಂದ ಡಿ.4ರವರೆಗೆ ದಿ. ಡಾ.ಟಿ.ಎಂ.ಎ.ಪೈ, ದಿ. ಮಲ್ಪೆ ಮಧ್ವರಾಜ್ ಮತ್ತು ಡಿ.ಎಸ್.ಎಲ್. ಭಟ್ ಸ್ಮಾರಕ ರಾಜ್ಯಮಟ್ಟದ 34ನೇ ಕನ್ನಡ ನಾಟಕ ಸ್ಪರ್ಧೆ ನಡೆಸಲಿದೆ. ರಾಜ್ಯದ (ಕಾಸರಗೋಡು ಜಿಲ್ಲೆ ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಹಾಗೂ ತೃತೀಯ 5 ಸಾವಿರ ನಗದು ಬಹುಮಾನ ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ನಟ, ನಟಿ, ಸಂಗೀತ, ಬೆಳಕು, ಬಾಲನಟನೆ, ಪ್ರಸಾದನ, ರಂಗಸಜ್ಜಿಕೆಗಳಿಗೂ ನಗದು ಸಹಿತ ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜತಗೆ ಉಡುಪಿಗೆ ಹೋಗಿ ಬರುವ ಪ್ರಯಾಣ ವೆಚ್ಚ ನೀಡಲಾಗುವುದು. ಆಸಕ್ತ ತಂಡಗಳು ಪ್ರವೇಶ ಪತ್ರವನ್ನು ಪ್ರಧಾನ ಕಾರ್ಯದರ್ಶಿ, ರಂಗಭೂಮಿ, ಮಥುರಾ ಛತ್ರ, ಉಡುಪಿ- 576101 ಇವರಿಗೆ ತಲುಪಿಸಬೇಕು (ಮೊ-9880593079). ಪ್ರವೇಶ ಪತ್ರ ಸ್ವೀಕರಿಸಲು ಅ.21 ಕೊನೆ ದಿನ ಎಂದು ಪ್ರಕಟಣೆ ತಿಳಿಸಿದೆ.
---
ಎತ್ತಿನಹೊಳೆ ಯೋಜನೆ ಶಂಕು ಸ್ಥಾಪನೆ ಮುಂದೂಡಲು ಮನವಿ
ಬೆಳ್ತಂಗಡಿ: ಎತ್ತಿನಹೊಳೆ ಯೋಜನೆಯ ಅನುಷ್ಠಾನದ ಕುರಿತು ಬೆಳ್ತಂಗಡಿ ತಾಲೂಕು ಹಿತರಕ್ಷಣಾ ವೇದಿಕೆ ಇತ್ತೀಚೆಗೆ ಸಭೆ ಸೇರಿ ಯೋಜನೆಯ ನಿಯೋಜಿತ ಶಂಕು ಸ್ಥಾಪನೆಯನ್ನು ಮುಂದೂಡುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದು ವಿನಂತಿಸಲಾಗಿದೆ. ಸಮಿತಿಯು ತಕ್ಷಣವೇ ಶಾಸಕ ವಸಂತ ಬಂಗೇರ ಸಹಕಾರ ಪಡೆದುಕೊಂಡು, ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳನ್ನು ಸಂಪರ್ಕಿಸಿ ಮುಖ್ಯಮಂತ್ರಿ ಬಳಿ ನಿಯೋಗ ಒಯ್ಯಲು ನಿರ್ಧರಿಸಲಾಗಿದೆ ಎಂದು ತಾಲೂಕು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.