ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಲೈಂಗಿಕ ಕಿರುಕುಳ; ಇಬ್ಬರ ಸೆರೆ

Srinivasa Murthy VN
Updated On : 23 Sept 2013, 1:45 am

ಮಣಿಪಾಲ: ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯದ ಗಮನ ಸೆಳೆದಿದ್ದ ಮಣಿಪಾಲದಲ್ಲಿ ಇನ್ನೊಂದು ಲೈಂಗಿಕ ಕಿರುಕುಳ ನಡೆದಿರುವ ಪ್ರಕರಣ ತಡವಾಗಿ ಬಹಿರಂಗಗೊಂಡಿದೆ.
ಮೂರು ವರ್ಷದ ಬಾಲಕಿ, ಖಾಸಗಿ ಶಾಲೆಯೊಂದರ ನರ್ಸರಿ ವಿದ್ಯಾರ್ಥಿನಿಗೆ ಆಕೆ ಶಾಲೆಗೆ ತೆರಳುವ ಬಸ್‌ನ ನಿರ್ವಾಹಕರಾದ ಸುಧೀರ್ ಹಾಗೂ ನಿರ್ವಾಹಕ ಕಂ ಕ್ಲೀನರ್ ಶುಭಕುಮಾರ್ (30) 4 ದಿನಗಳ ಹಿಂದೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಶನಿವಾರ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದ್ದು, ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಅನಾರೋಗ್ಯದಿಂದ ಸೈನಿಕ ಸಾವು
ಭಾಲ್ಕಿ: ಅನಾರೋಗ್ಯದಿಂದ ಬಳಲುತ್ತಿದ್ದ ಸೈನಿಕನೊಬ್ಬ ತಾಲೂಕಿನ ಮದಕಟ್ಟಿ ಗ್ರಾಮದಲ್ಲಿ ಮೃತಪಟ್ಟಿದ್ದಾನೆ.
ಭಾಸ್ಕರ್ ಪಂಡರಿನಾಥ ಜೊಳದಾಪಕೆ (29) ಮೃತಪಟ್ಟವರು. ಈತ ಆಂಧ್ರದ ಸಿಕಂದರಾಬಾದ್ ವಲಯದ ಭೂ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲ್ಲಿಸುತ್ತಿದ್ದ. ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ಈತನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ತಾಲೂಕು ಆಡಳಿತದಿಂದ ಶನಿವಾರ ನೆರವೇರಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಗ್ರಾಮೀಣ ಪೊಲೀಸ್ ಇನ್ಸ್‌ಪೆಕ್ಟರ್ ಕಳ್ಳಿಗುಡ್ಡ, ಖಟಕ ಚಿಂಚೋಳಿ ಠಾಣೆಯ ಪಿಎಸ್‌ಐ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement