ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸನಿಹ ಕುಪ್ಪೆಟ್ಟಿಗೆ ರಾಷ್ಟ್ರಪತಿ ಪುರಸ್ಕಾರ

Srinivasa Murthy VN
Updated On : 23 Sept 2013, 12:21 pm

ಪುತ್ತೂರು:  ದೆಹಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ಹರ್ಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯ ಎನ್‌ವೈಸಿ ಗಡ್ಪುರಿಯಲ್ಲಿ ಏರ್ಪಸಿದ 5 ದಿನಗಳ ಗೆಟ್-ಟುಗೆದರ್ ಕ್ಯಾಂಪ್‌ಗೆ ಕರ್ನಾಟಕ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪುತ್ತೂರು ಮೂಲದ ಸನಿಹ ಕುಪ್ಪೆಟ್ಟಿ ಅವರಿಗೆ ರಾಷ್ಟ್ರಪತಿ ಪುರಸ್ಕಾರ ಲಭಿಸಿದೆ.  
ಕ್ಯಾಂಪ್ ನಡೆದ ಬಳಿಕ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗೈಡ್ಸ್‌ನ ಅತ್ಯುನ್ನತ ಪುರಸ್ಕಾರವಾದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸನಿಹಾ ಕುಪ್ಪೆಟ್ಟಿಗೆ ನೀಡಿ ಗೌರವಿಸಿದರು. ಪ್ರಸ್ತುತ ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ಆರ್ಕಿಟೆಕ್ಚರ್ ಎಂಜಿನಿಯರ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸನಿಹ ಪುತ್ತೂರಿನ ರಾಜೇಂದ್ರ ಕುಪ್ಪೆಟ್ಟಿ-ರೇಖಾ ದಂಪತಿ ಪುತ್ರಿ. ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ಗೈಡ್ ಶಿಕ್ಷಕಿ ಸುನೀತಾ ಮಾರ್ಗದರ್ಶನದಲ್ಲಿ ಇವರು ಈ ಪುರಸ್ಕಾರ ಪಡೆದಿದ್ದಾರೆ.

ಸಾಲದ ಹೊರೆ: ರೈತ ಆತ್ಮಹತ್ಯೆ
ಭಾಲ್ಕಿ: ಸಾಲದ ಹೊರೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಶೆಂಪುರ್ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಿಶನ್‌ರಾವ್ ಸಂತುರಾಮ (50) ಮೃತಪಟ್ಟವರು. ಇವರಿಗೆ ನಾಲ್ಕು ಎಕರೆ ಜಮೀನಿದ್ದು, ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 3.5 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಆರ್ಥಿಕ ಸಂಕಷ್ಟದಿಂದ ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಧನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement