ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅರಬ್ಬಿ ಕಡಲಲ್ಲಿ ಶಿರೂರು ಶ್ರೀ ಈಜು

Srinivasa Murthy VN
Updated On : 16 Feb 2014, 11:16 am

ಮಲ್ಪೆ: ಉಡುಪಿ ಉತ್ಸವ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಈಜು ಸ್ಪರ್ಧೆಗೆ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಈಜುವ ಮೂಲಕ ಚಾಲನೆ ನೀಡಿದರು.
ಮಲ್ಪೆ ಸಮೀಪದ ಸೇಂಟ್ ಮೇರಿಸ್ ದ್ಪೀಪದಿಂದ ಮಲ್ಪೆ ಬೀಚ್‌ವರೆಗೆ ಸುಮಾರು 1 ಗಂಟೆ ಕಾಲ ನಡೆದ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡು, ಸುಮಾರು 36ಕ್ಕೂ ಅಧಿಕ ಈಜುಗಾರರಿಗೆ ಶಿರೂರು ಸ್ವಾಮೀಜಿ ಸಾಥ್ ನೀಡಿದರು. 64ರ ಹರೆಯದ ಗೋಪಾಲ ಅಡಿಗ ಸಾಲಿಗ್ರಾಮ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಂಗಳೂರಿನ ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್‌ನ ಶ್ರೇಯಸ್ ರಾವ್ ಪ್ರಥಮ ಸ್ಥಾನ ಪಡೆದು 15 ಸಾವಿರ ನಗದು ಬಹುಮಾನ ಗೆದ್ದುಕೊಂಡರು. ಎಂಎಸ್‌ಸಿ ಸ್ವಿಮ್ಮಿಂಗ್ ಕ್ಲಬ್‌ನ ಶಿಶಿರ್ ಎಸ್. ಗಟ್ಟಿ ದ್ವಿತೀಯ ಸ್ಥಾನ ಹಾಗೂ 12 ಸಾವಿರ ನಗದು ಬಹುಮಾನ ಹಾಗೂ ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್‌ನ ಸುರಿನ್ ತೃತೀಯ ಸ್ಥಾನ ಹಾಗೂ 10 ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡರು.
ಬೀಚ್ ವಾಲಿಬಾಲ್, ಥ್ರೋ ಬಾಲ್, ಕಬಡ್ಡಿ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ, ಗಾಳಿಪಟ ಪ್ರದರ್ಶನ, ಬೈಕ್ ಸ್ಟಂಟ್, ಮರಳು ಶಿಲ್ಪ ರಚನೆ, ದೋಣಿ ಸ್ಪರ್ಧೆ, ಮೀನು ಹಿಡಿಯುವ ಸ್ಪರ್ಧೆ ಹಾಗೂ ಗುರುಕಿರಣ್ ಅವರ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜನ ಮನರಂಜಿಸಿದವು.

ಈಜುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಸಿಗುತ್ತದೆ ಎಂದು ಖುದ್ದು ಈಜುವುದರ ಮೂಲಕ ಕಂಡುಕೊಂಡಿದ್ದೇನೆ. ಯುವಕರನ್ನು ಸಂಘಟಿಸುವಲ್ಲಿ ನೆರವಾಗುವ ಇಂಥ ಸ್ಪರ್ಧೆಗಳು ನಿಯಮಿತವಾಗಿ ನಡೆಯುತ್ತಿರಬೇಕು.
-ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಶಿರೂರು ಮಠಾಧೀಶರು

ಈಜು ಸ್ಪರ್ಧೆಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಈಜು ಸ್ಪರ್ಧೆಗಳು ನಡೆಯುವಲ್ಲಿ ತೆರಳಿ ಭಾಗವಹಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದೇನೆ. ಈಗಾಗಲೇ ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆವ ಮಾಸ್ಟರ್ಸ್ ವರ್ಲ್ಡ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ.
-ಗೋಪಾಲ ಅಡಿಗ, ಸಾಲಿಗ್ರಾಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement