ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕ್ರೌರ್ಯದತ್ತ ಮಾನವ ಚಿಂತನೆ: ಡಾ.ನಾ. ಮೊಗಸಾಲೆ ವಿಷಾದ

Srinivasa Murthy VN
Updated On : 16 Feb 2014, 11:14 am

ಪುತ್ತೂರು (ರಾಮಚಂದ್ರ ದೇವ ವೇದಿಕೆ, ಅನುರಾಗ ವಠಾರ): ಮನುಷ್ಯ ಸಂಬಂಧ ನಾಶವಾಗುತ್ತ ನಮ್ಮ ಚಿಂತನೆಗಳು ಕ್ರೌರ್ಯದತ್ತ ವಾಲುತ್ತಿರುವುದು ಇಂದಿನ ದುರಂತವಾಗಿದ್ದು ಹಿಟ್ಲರ್, ಮೋದಿಯನ್ನು ಬೈಯ್ಯುವ ನಾವು ಕ್ರೌರ್ಯದಲ್ಲಿ ಯಾವ ಹಂತದಲ್ಲಿದ್ದೇವೆ ಎಂಬುದನ್ನು ಸ್ವತಃ ಅರಿತುಕೊಳ್ಳುವ ಅಗತ್ಯವಿದೆ ಎಂದು ಸಾಹಿತಿ, ಸಂಘಟಕ ಕಾಂತಾವರದ ಡಾ. ನಾ.ಮೊಗಸಾಲೆ ಅಭಿಪ್ರಾಯಪಟ್ಟಿದ್ದಾರೆ.  ಪುತ್ತೂರಿನ ಅನುರಾಗ ವಠಾರದಲ್ಲಿ ಕರ್ನಾಟಕ ಸಂಘ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಫೆ. 23ರ ತನಕ ನಡೆಯಲಿರುವ 'ಸಾಹಿತ್ಯ ಕಲಾಕುಶಲೋಪರಿ-11' ಕಾರ್ಯಕ್ರಮದಲ್ಲಿ ಭಾನುವಾರ ಕರ್ನಾಟಕ ಸಂಘದಿಂದ ಕೊಡಮಾಡಲ್ಪಟ್ಟ 'ಅನುರಾಗ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿ, ಜಾತಿ ವ್ಯವಸ್ಥೆ ಮತ್ತು ದೇವರ ಕುರಿತು ನಂಬಿಕೆಯಿಲ್ಲದ ನಾನು, ನನ್ನ ಬದುಕಿನ ಎಲ್ಲಾ ಅನುಭವಗಳನ್ನು 'ಬಯಲ ಬೆಟ್ಟ' ಕೃತಿಯಲ್ಲಿ ಯಾವುದೇ ಅಂಜಿಕೆ, ಮುಲಾಜುಗಳಿಲ್ಲದೆ ತಿಳಿಸಿದ್ದೇನೆ. ನನ್ನದು ಏಕಾಂತವಾದವಲ್ಲ ಅನೇಕಾಂತ ವಾದವಾಗಿದ್ದು ಡಾ. ಶಿವರಾಮ ಕಾರಂತರು ತನ್ನ ಆರಾಧ್ಯ ದೈವವಾದರೆ, ಬೋಳಂತಕೋಡಿ ನನಗೆ ಆದರ್ಶ ಎಂದರು.
ಭಾಷಾ ಅಸ್ಪೃಶ್ಯತೆ ಸಲ್ಲದು: ಸಾಂಸ್ಕೃತಿಕ ದಿವಾಳಿತನ ತುತ್ತ ತುದಿಯಲ್ಲಿರುವ ಇಂದಿನ ದಿನಗಳಲ್ಲಿ ಭಾಷೆಯಲ್ಲಿಯೂ ಅಸ್ಪೃಶ್ಯತೆ ಮಾಡಲಾಗುತ್ತಿದೆ. ವಿಶ್ವ ತುಳು ಸಮ್ಮೇಳನದಲ್ಲಿ ಶಿವಳ್ಳಿ ಬ್ರಾಹ್ಮಣರ ತುಳು ಭಾಷೆಗೆ ಗೌರವ ನೀಡಲಾಗಿಲ್ಲ. ಭಾಷಾ ವಿಚಾರದಲ್ಲಿ ಅಸ್ಪೃಶ್ಯತೆ ಸರಿಯಲ್ಲ ಎಂದರು.  ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಡಾ. ಮೊಗಸಾಲೆ ಅವರನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement