ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿಘ್ನ ಸಂತೋಷಿಗಳ ಸಂಖ್ಯೆ ಕಡಿಮೆಯಾಗಲಿ: ಪುತ್ತಿಗೆ ಶ್ರೀ

Srinivasa Murthy VN
Updated On : 17 Feb 2014, 12:14 pm

ಉಡುಪಿ: ಸಮಾಜದಲ್ಲಿ ಒಗ್ಗೂಡಿಸುವವರು ಬಹಳಷ್ಟು ಜನರಿದ್ದರೂ, ಒಳ್ಳೆಯ ಕೆಲಸಗಳಿಗೆ ತೊಡಕುಂಟು ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಸಮಾಜದಲ್ಲಿ ಶಾಂತಿ ನೆಲೆಸಲು ಇಂತಹ ವಿಘ್ನ ಸಂತೋಷಿಗಳ ಸಂಖ್ಯೆ ಕಡಿಮೆಯಾಗಬೇಕಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಉಡುಪಿಯ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲ ದಶಮಾನೋತ್ಸವ ಅಂಗವಾಗಿ ನಡೆದ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣ ಸಮುದಾಯದವರು ಸ್ವಹಿತದೊಂದಿಗೆ ಸಮಾಜದ ಹಿತವನ್ನೂ ಕಾಯಬೇಕಿದೆ ಎಂದರು.
ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ. ಜಯರಾಮ ಭಟ್, ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ವಿಷ್ಣುಮೂರ್ತಿ ಎರ್ಕಡಿತ್ತಾಯ, ಕೊಡಂಕೂರು ದೇವರಾಜಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement