ಅನುಚಿತ ವರ್ತನೆ; ಧರ್ಮದೇಟು
ವಿಟ್ಲ: ವಿಟ್ಲದ ಉಪ ನೋಂದಣಿ ಕಚೇರಿ ಸಮೀಪ ಆರನೇ ತರಗತಿಯ ವಿದ್ಯಾರ್ಥಿನಿಯರನ್ನು ಪೀಡಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ನಂತರ ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ನಡೆದಿದೆ. ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಆಲಿ(35) ಬಂಧಿತ. ಹುಂಡೈ ಕಾರಿನಲ್ಲಿ ಬರುವ ವ್ಯಕ್ತಿಯೊಬ್ಪ ರಸ್ತೆಯಲ್ಲಿ ಹೋಗುವ ಶಾಲೆ ವಿದ್ಯಾರ್ಥಿಗಳನ್ನು ಸನ್ನೆಮಾಡಿ ಕರೆಯುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದಾನೆಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ಥಳೀಯ ಯುವಕರ ತಂಡ ಶನಿವಾರ ಮಧ್ಯಾಹ್ನ ಶಾಲೆಯ ಬಳಿ ಹೊಂಚು ಹಾಕಿ ಕುಳಿತಿತ್ತು. ಇದೇ ವೇಳೆಗೆ ಹುಂಡೈ ಕಾರಿನಲ್ಲಿ ಬಂದ ಮಹಮ್ಮದ್ ಆಲಿ ಬಾಲಕಿಯೊಬ್ಬಳ ಕೈಹಿಡಿದು ಎಳೆದುದಲ್ಲದೆ ಇನ್ನೊಬ್ಬಳನ್ನು ಅನುಚಿತ ವಾಕ್ಯ ಬಳಸಿ ಕರೆದಿದ್ದಾನೆ. ಕೂಡಲೇ ಯುವಕರ ತಂಡ ಆತನನ್ನು ಹಿಡಿದು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.