ಸಲಿಂಗ ಕಾಮಕ್ಕೆ 5 ವರ್ಷದ ಬಾಲಕ ಬಲಿ!
ಫೆ.23ರಿಂದ ನಾಪತ್ತೆಯಾಗಿದ್ದ ಪಡುಬೆಳ್ಳೆ ಗ್ರಾಮದ ಬಾಲಕ ನವೀನ್ ್ಣ ಪ್ರಕರಣವನ್ನು ಭೇದಿಸಿರುವ ಕಾರ್ಕಳ ಪೊಲೀಸರು
ಉಡುಪಿ: ಸಲಿಂಗ ಕಾಮಕ್ಕೆ 5 ವರ್ಷದ ಮುಗ್ಧ ಬಾಲಕ ಬಲಿಯಾದ ಪ್ರಕರಣವನ್ನು ಕಾರ್ಕಳ ಪೊಲೀಸರು ಭೇದಿಸಿದ್ದಾರೆ.
ಆಶ್ಚರ್ಯ ಎಂದರೆ, ಬಾಲಕನನ್ನು ಕೊಲೆ ಮಾಡಿದ್ದು ಬಾಲಾರೋಪಿ. ಈತನಿಗೆ 17 ವರ್ಷ ವಯಸ್ಸಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಲ್ಲು ಕ್ವಾರಿ ಕಾರ್ಮಿಕನಾಗಿ ಕೆಲಸ ಮಾಡುವ ಆರೋಪಿ ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಸಲಿಂಗ ಕಾಮದ ಮಾಹಿತಿಯನ್ನು ಬಾಲಕ ಬಹಿರಂಗಪಡಿಸುವ ಹೆದರಿಕೆಯಿಂದಾಗಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಪೊಲೀಸರೆದರು ಹೇಳಿದ್ದಾನೆ.
ಫೆ.23ರಂದು ಕಾಣೆಯಾಗಿದ್ದ ಬಾಲಕ: ಪಡುಬೆಳ್ಳೆ ಗ್ರಾಮದ ಪಾಂಬೂರಿನ ಧರ್ಮಶ್ರೀ ಕಾಲನಿಯ ನಾಗರಾಜ-ಆಶಾ ದಂಪತಿಯ ಪುತ್ರ ನವೀನ್ ಫೆ.23ರಂದು ಕಾಣೆಯಾಗಿದ್ದ. ಮುಂದೆ ಮಾರ್ಚ್ 9ರಂದು ಮನೆಯಿಂದ ಸುಮಾರು 1 ಕಿ.ಮೀ. ದೂರದ ದಟ್ಟ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಅಲ್ಲಿದ್ದ ಚಪ್ಪಲಿ, ಬಟ್ಟೆ ಬರೆಗಳಿಂದಾಗಿ ಈ ಶವ ನವೀನ್‌ನದ್ದು ಎಂದು ಸಾಬೀತಾಗಿತ್ತು.
ಈ ಪ್ರಕರಣ ವಾಮಾಚಾರ, ಸಲಿಂಗ ಕಾಮ, ಪ್ರಾಣಿಗಳಿಗೆ ಬಲಿ, ಆಕಸ್ಮಿಕ ಮರಣ ಇತ್ಯಾದಿ ಕೋನಗಳಿಂದ ತನಿಖೆ ನಡೆಸಿದ ಕಾರ್ಕಳ ಡಿವೈಎಸ್ಪಿ ಅಣ್ಣಾಮಲೈ ಮತ್ತು ಅವರ ತಂಡ 40 ಮಂದಿಯನ್ನು ವಶಕ್ಕೆ ತೆಗೆದುಕೊಂಡ ವಿಚಾರಣೆಗೊಳಪಡಿಸಿತ್ತು.
ಅಂದು ನಡೆದಿದ್ದೇನು?
ಫೆ.23ರಂದು ಸಂಜೆ ಬಾಲಕ ನವೀನ್ ಮನೆಯ ಬಳಿ ಇರುವ ಚಿಕ್ಕಪ್ಪನ ಮನೆಗೆ ಹೋಗುವಾಗ ಕಾಣೆಯಾಗಿದ್ದ. ದಾರಿ ಮಧ್ಯೆ ಬಾಲಕನ ಮನೆಯ ಸಮೀಪದ ನಿವಾಸಿ ಈ ಆರೋಪಿ ಆತನನ್ನು ಚಾಕೋಲೆಟ್ ಕೊಡುವ ಆಮೀಷ ಒಡ್ಡಿ ಪಕ್ಕದ ಕಾಡಿಗೆ ಕರೆದುಕೊಂಡು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದ. ತೀರಾ ನೋವು ಅನುಭವಿಸಿದ ಬಾಲಕ ಮನೆಗೆ ಹೋಗಿ ಹೇಳುತ್ತೇನೆ ಎಂದು ಹೇಳಿದಾಗ, ತನ್ನ ಬಂಡವಾಳ ಬಹಿರಂಗವಾಗುತ್ತದೆ ಎಂದು ಹೆದರಿ ಆತನ ಕತ್ತು ಹಿಸುಕಿ ಕೊಂದೇ ಬಿಟ್ಟ ಮತ್ತು ಶವವನ್ನು ಅಲ್ಲಿಯೇ ಪೊದೆಗೆ ಹಾಕಿ ಏನೂ ಆಗಿಲ್ಲ ಎಂದು ಮನೆಗೆ ಬಂದಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಎಸ್ಪಿ ಬೋರಲಿಂಗಯ್ಯ ತಿಳಿಸಿದ್ದಾರೆ.