8 ಮಂದಿ ನಾಮಪತ್ರ ಸಲ್ಲಿಕೆ
ಉಡುಪಿ: ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಬುಧವಾರ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಒಟ್ಟು 8 ಮಂದಿ ಅಭ್ಯರ್ಥಿಗಳ 13 ನಾಮಪತ್ರ ಸಲ್ಲಿಕೆಯಾಗಿವೆ.
ಕಾಂಗ್ರೆಸ್‌ನ ಕೆ. ಜಯಪ್ರಕಾಶ್ ಹೆಗ್ಡೆ 4 ನಾಮಪತ್ರಗಳನ್ನು, ಬಿಜೆಪಿಯ ಶೋಭಾ ಕರಂದ್ಲಾಜೆ 3 ನಾಮಪತ್ರಗಳನ್ನು, ಸಿಪಿಐ(ಎಂ.ಎಲ್.) ಪಕ್ಷದ ಸಿ.ಜೆ. ಜಗನ್ನಾಥ್, ಪಕ್ಷೇತರ ಅಭ್ಯರ್ಥಿಗಳಾದ ಬಿ. ಧನಂಜಯ, ಎಂ. ಡಿ. ಮೊಯಿದ್ದೀನ್ ಖಾನ್, ಮುಂಜುನಾಥ ಜಿ., ಶ್ರೀನಿವಾಸ, ಸುಧೀರ್ ಕಾಂಚನ್ ತಲಾ ಒಂದೊಂದು ನಾಮಪತ್ರಗಳನ್ನು ಬುಧವಾರ ಸಲ್ಲಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು ಬಿಜೆಪಿ 4, ಕಾಂಗ್ರೆಸ್‌ನ 4, ಜೆಡಿಎಸ್‌ನಿಂದ 2, ಸಿಪಿಐ (ಎಂ.ಎಲ್)2, ಬಿಎಸ್‌ಪಿ, ಆಮ್ ಆದ್ಮಿ, ಸಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ 1ರಂತೆ ಒಟ್ಟು 8 ನಾಮಪತ್ರಗಳು ಸೇರಿ 14 ಅಭ್ಯರ್ಥಿಗಳು ಒಟ್ಟು 23 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಾಮಪತ್ರಗಳ ಪರಿಶೀಲನೆ ಮಾ.27ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮಾ.29ರಂದು ಅವಕಾಶ ಇದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಅವರು ಹೇಳಿದ್ದಾರೆ.