ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ

Srinivasa Murthy VN
Updated On : 27 Mar 2014, 10:29 am

ಉಡುಪಿ: ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ಬುಧವಾರ ನಾಮಪತ್ರ ಸಲ್ಲಿಸಿದರು.
 ಈ ಸಂದರ್ಭದಲ್ಲಿ ಅವರೊಂದಿಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಸಚಿವ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮತ್ತು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯಕುಮಾರ್ ಇದ್ದರು.
 61ರ ಹರೆಯದ ಹೆಗ್ಡೆ ಅವರು ಬಿ.ಎ., ಎಲ್.ಎಲ್.ಬಿ. ಪದವೀಧರರಾಗಿದ್ದಾರೆ. ತಾನು ವೃತ್ತಿಯಲ್ಲಿ ವಕೀಲನಾಗಿದ್ದು, ಪತ್ನಿ ಶೋಭಾ ಹೆಗ್ಡೆ ಕೃಷಿಕರು ಎಂದು ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
 ಹೆಗ್ಡೆ ಅವರು ತಮ್ಮ ಸ್ಥಿರಚರ ಒಟ್ಟು ಆಸ್ತಿ ರು. 7,79,43,128 ಆಗಿದ್ದು ರು. 84,99,442 ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಹೊಂದಿರುವುದಾಗಿಯೂ ತಿಳಿಸಿದ್ದಾರೆ. ಅಲ್ಲದೇ ತಮ್ಮ ಪತ್ನಿ ಶೋಭಾ ರು. 1,23,61,945 ಆಸ್ತಿ ಮತ್ತು ರು. 81,41,369 ಸಾಲ ಹೊಂದಿದ್ದಾರೆ. ಅಲ್ಲದೆ ಹೆಗ್ಡೆ ಒಂದು ಟೋಯೋಟಾ ಕಾರು, 25 ಗ್ರಾಂ ಚಿನ್ನಾಭರಣ, ಪತ್ನಿ 950 ಗ್ರಾಂ ಚಿನ್ನಾಭರಣಗಳ ವಾರಸುದಾರರಾಗಿದ್ದಾರೆ.
 2012ರ ಉಪಚುನಾವಣೆಯ ಸಂದರ್ಭದಲ್ಲಿ ಅವರು ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಹೆಗ್ಡೆ ಅವರು ಆಸ್ತಿ ರು. 2.90 ಕೋಟಿ ಇತ್ತು ಮತ್ತು ಪತ್ನಿ ಶೋಭಾ ಅವರ ಆಸ್ತಿ ರು. 31.60 ಲಕ್ಷ ಇತ್ತು. ಇಬ್ಬರ ಆಸ್ತಿಯೂ ಕೇವಲ 2 ವರ್ಷಗಳೊಳಗೆ 3 ಪಟ್ಟು ಹೆಚ್ಚಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement