ಉತ್ತರ ಕನ್ನಡ

ನಾಳೆ ಕೂರ್ಮಗಡ ಜಾತ್ರೆ

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಕಾರವಾರ, ಜ. 25

ಅರಬ್ಬಿ ಸಮುದ್ರದ ದ್ವೀಪ ಕೂರ್ಮಗಡದಲ್ಲಿ ಜ. 27ರಂದು ನರಸಿಂಹ ದೇವರ ಜಾತ್ರೆ. ಕಡಲ ಮಡಿಲಲ್ಲಿ ನಡೆಯುವ ಜಾತ್ರೆ ಈ ಬಾರಿ ಭಾನುವಾರ ನಡೆಯಲಿರುವುದರಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕೂರ್ಮಗಡಕ್ಕೆ ಲಗ್ಗೆ ಇಡುವ ಸಾಧ್ಯತೆ ಇದೆ.
ಕೂರ್ಮಗಡ ಜಾತ್ರೆಗೆ ಕೇವಲ ಭಕ್ತರಷ್ಟೇ ಅಲ್ಲ, ಅಲ್ಲಿ ಜಲ ಸಾಹಸಿಗಳು, ಚಾರಣಿಗರು, ಪರಿಸರಪ್ರಿಯರು ಹೀಗೆ ಎಲ್ಲ ವಿಧದ ಜನರೂ ಆಗಮಿಸುತ್ತಾರೆ. ಏಕೆಂದರೆ ಇವೆಲ್ಲ ಅನುಭವವೂ ಈ ಜಾತ್ರೆಯಲ್ಲಿ ಸಿಗುತ್ತವೆ. ಈ ಜಾತ್ರೆಗೆ ಹೋಗಬೇಕಾದಲ್ಲಿ ಕೋಡಿಬಾಗದ ಕಾಳಿ ನದಿ ಸೇತುವೆ ಪಕ್ಕದಿಂದ ಮರಳು ಸಾಗಿಸುವ ಬೋಟಿನಲ್ಲಿ ಸಾಗಬೇಕು. ಕಡಲ ಅಲೆಗಳ ನಡುವೆ ತೊನೆದಾಡುತ್ತ ಬೋಟಿನಲ್ಲಿ ಸುಮಾರು ಒಂದು ಗಂಟೆ ಕಾಲ ಸಂಚರಿಸುವುದು ಒಂದು ರೋಚಕ ಅನುಭವ.
ಕೂರ್ಮಗಡದಲ್ಲಿ ಬೋಟಿನಿಂದ ಇಳಿದ ಮೇಲೆ ಕಡಿದಾದ ಗುಡ್ಡ   ಏರಬೇಕು. ರಾಕ್ ಕ್ಲೈಂಬಿಂಗ್ ಪ್ರಾಥಮಿಕ ಪಾಠವೂ ಇಲ್ಲಿ ಲಭ್ಯವಾಗುತ್ತದೆ. ಏದುಸಿರು ಬಿಡುತ್ತ ಕಾಲುದಾರಿಯಲ್ಲಿ ಗುಡ್ಡವೇರಬೇಕು. ದ್ವೀಪದ ಸುತ್ತಲೂ ಚಾರಣ ಮಾಡಬಹುದು. ಗುಡ್ಡದ ತುತ್ತತುದಿಯಲ್ಲಿರುವ ನರಸಿಂಹ ದೇವಾಲಯದ ಬಳಿ ಸಿಗುವ ಪ್ರಕೃತಿ ರಮ್ಯ ನೋಟ ವರ್ಣನಾತೀತ. ಕಾಳಿ ಸಂಗಮದ ವಿಹಂಗಮ ನೋಟ ನಿಸರ್ಗಪ್ರಿಯರಿಗೆ ಆಪ್ಯಾಯಮಾನ.  ಒಂದೇ ಜಾತ್ರೆ ಹಲವು ವೈಶಿಷ್ಟ್ಯಗಳ ಸಂಗಮವಾಗಿದೆ. ಹೀಗಾಗಿ ಜಾತ್ರೆಗೆ ಬರುವ ಜನರು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದಾರೆ. ಅದರಲ್ಲೂ ಈ ಬಾರಿ ಭಾನುವಾರ ಬಂದಿದೆ. ರಜಾ ದಿನವಾಗಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಜನತೆ ಆಗಮಿಸುವ ನಿರೀಕ್ಷೆ ಇದೆ. ಈ ಜಾತ್ರೆಯಲ್ಲಿ ಕಾರವಾರ, ಅಂಕೋಲಾ, ಗೋವಾ, ಮಹಾರಾಷ್ಟ್ರ ಮತ್ತಿತರ ಕಡೆಗಳಿಂದಲೂ ಜನತೆ ಭಾಗವಹಿಸುತ್ತಾರೆ. ಈಚಿನ ವರ್ಷಗಳಲ್ಲಿ ವಿದೇಶಿಗರೂ ಆಗಮಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಕೂರ್ಮಗಡದಲ್ಲಿ ಅಂಗಡಿ, ಮಳಿಗೆಗಳು ತಲೆ ಎತ್ತುತ್ತವೆ. ತಿಂಡಿ ತಿನಿಸುಗಳೂ ಲಭ್ಯ. ಆದರೆ ಎಲ್ಲವನ್ನೂ ಕಾರವಾರದಿಂದ ಕೊಂಡೊಯ್ಯಬೇಕಾಗಿರುವುದರಿಂದ ಸ್ವಲ್ಪ ದುಬಾರಿ. ಹಲವರಿಗೆ ಕೂರ್ಮಗಡ ಒಂದು ಪಿಕ್‌ನಿಕ್ ಸ್ಪಾಟ್. ತಿಂಡಿಗಳನ್ನು ಕೊಂಡೊಯ್ದು ರಮಣೀಯ ಪರಿಸರದಲ್ಲಿ ಕುಳಿತು ತಿನ್ನುವ ಮೋಜೇ ಬೇರೆ.  ಮೀನುಗಾರರು ಇಲ್ಲಿನ ನರಸಿಂಹ ದೇವರ ಭಕ್ತರಾಗಿರುವುದರಿಂದ ಅಂದು ಮೀನುಗಾರಿಕೆ ಬಂದ್ ಮಾಡಿ, ತಮ್ಮ ತಮ್ಮ ಬೋಟುಗಳೊಂದಿಗೆ ಕೂರ್ಮಗಡಕ್ಕೆ ಆಗಮಿಸುತ್ತಾರೆ. ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನೂರಾರು ಬೋಟುಗಳು ಕೂರ್ಮಗಡಕ್ಕೆ ಆಗಮಿಸುವುದರಿಂದ ಕಡಲತೀರ ಬೋಟುಗಳ ಜಾತ್ರೆಯಂತೆ ಕಂಗೊಳಿಸುತ್ತದೆ. ಜಾತ್ರೆಗೆ ಹೋಗಬೇಕೆಂದರೆ ಅಂದು ಬೆಳಗ್ಗೆ ಕಾರವಾರದಿಂದ ಗೋವಾ ಮಾರ್ಗದಲ್ಲಿನ ಕಾಳಿ ಸೇತುವೆ ಬಳಿ ಬಂದರೆ ಸಾಕು. ಬೋಟುಗಳು ಕೂರ್ಮಗಡಕ್ಕೆ ನಿಮ್ಮನ್ನು ಕರೆದೊಯ್ಯುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)