ಸಂಪಾದಕೀಯ

ಕನ್ನಡದ ಕಿಚ್ಚನ್ನು ಹಚ್ಚಿದ ಜಯದೇವಿತಾಯಿ ಲಿಗಾಡೆ

ಜಯದೇವಿ ತಾಯಿ ಲಿಗಾಡೆಯವರು ಓದಿದ್ದು ನಾಲ್ಕನೇ ತರಗತಿ. ಅದೂ ಮರಾಠಿ ಮಾಧ್ಯಮದಲ್ಲಿ. ಆದರೆ ಅವರು 1974ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು ಅಂದರೆ ಅವರ ಸಾಹಿತ್ಯ ಸೇವೆಯ ಅರಿವಾದೀತು. ಕನ್ನಡ ಮತ್ತು ಮರಾಠಿಯಲ್ಲಿ ಅನೇಕ ಕೃತಿಗಳನ್ನು ಬರೆದು ಪ್ರಸಿದ್ಧರಾದರು. ಜಿ.ಪಿ.ರಾಜರತ್ನಂ ಅವರು ಲಿಗಾಡೆಯವರ ಶ್ರೀ ಸಿದ್ಧರಾಮ ಪುರಾಣವನ್ನು ಮಹಾಕಾವ್ಯವೆಂದು ಕೊಂಡಾಡಿದ್ದಾರೆ. ಸೊಲ್ಲಾಪುರದಲ್ಲಿ ರಜಾಕರ ಹಾವಳಿ ಹೆಚ್ಚಾಗಿದ್ದ ಸಮಯದಲ್ಲಿ ಅನೇಕ ಕನ್ನಡ ಶಾಲೆಗಳನ್ನು ಸ್ಥಾಪಿಸಿದರು. ಹೆಸರಿಗೆ ಉರ್ದು ಶಾಲೆ, ಆದರೆ ಅಲ್ಲಿ ಕನ್ನಡವನ್ನು ಕಲಿಸಲಾಗುತ್ತಿತ್ತು. 25ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದರು. ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಬೆಳಗಾವಿ, ಬೀದರ್, ಸಾಂಗ್ಲಿ, ಕೊಲ್ಲಾಪುರ, ಉಸ್ಮಾನಾಬಾದ್ ಭಾಗದ ಹಳ್ಳಿಹಳ್ಳಿಗೆ ತೆರಳಿದರು. ಅವರ ಘೋಷಣೆ, ಕನ್ನಡ ಕಲಿಯಿರಿ, ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿರಿ ಎಂಬುದಾಗಿತ್ತು. ರಜಾಕರ ಹಾವಳಿಯಲ್ಲಿ ನೊಂದ ನೂರಾರು ನಿರಾಶ್ರಿತರ ಹೊಟ್ಟೆ ಬಟ್ಟೆ ನೋಡಿಕೊಂಡ ಅನ್ನದಾತೆಯಾದರು. ಒಮ್ಮೆ 1950 ರಲ್ಲಿ ಹೈದರಾಬಾದ್ ಪ್ರದೇಶದಲ್ಲಿ ಪ್ರವಾಸದಲ್ಲಿದ್ದಾಗ ಒಂದು ಕನ್ನಡಿಗರ ಸಭೆಯಲ್ಲಿ ಕನ್ನಡಿಗರ ಶಾಲೆಗಳು ಮುಚ್ಚುತ್ತಿರುವುದರ ಕಾರಣ ಕೇಳಿದರು. ಆಗ ಅವರಿಗೆ ತಿಳಿದು ಬಂತು, ಅಲ್ಲಿ ಕನ್ನಡ ಶಿಕ್ಷಕರು ಸಿಗುತ್ತಿಲ್ಲ ಎಂದು. ಆಗ ಸೊಲ್ಲಾಪುರಕ್ಕೆ ಬಂದವರೇ ಕನ್ನಡ ಶಿಕ್ಷಕರು ಬೇಕಾಗಿದ್ದಾರೆ ಎಂದು ತಾವೇ ಜಾಹಿರಾತು ನೀಡಿದರು. ತಮ್ಮ ಸ್ವಂತ ವೆಚ್ಚದಲ್ಲಿ ನಾಲ್ಕು ನೂರು ಶಿಕ್ಷಕರನ್ನು ನೇಮಿಸಿ ಕಳಿಸಿಕೊಟ್ಟರು. ಮನೆಯ ಸಂಪತ್ತನ್ನು ಸಮಾಜ ಸೇವೆಗಾಗಿ ವಿನಿಯೋಗಿಸಿದರು. ಅವರ ಪ್ರಕಾರ, ಗಡಿಯಲ್ಲಿರುವ ಶಿಕ್ಷಕರು ಕೇವಲ ಶಿಕ್ಷಕರಲ್ಲ, ಕನ್ನಡದ ಸ್ವಯಂಸೇವಕರು, ಕನ್ನಡವನ್ನು ಕಾಯುವ ಸೈನಿಕರು ಆಗಿದ್ದರು. ಅವರ ಪ್ರಯತ್ನದಿಂದಾಗಿ ಹೈದರಾಬಾದ್ ಗಡಿ ಪ್ರದೇಶದಲ್ಲಿ ಮುಚ್ಚಿದ್ದ ಕನ್ನಡ ಶಾಲೆಗಳು ತೆರೆದವು. ಜನ ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸತೊಡಗಿದರು. ಕನ್ನಡ ಕೋಟೆ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, ಗಡಿನಾಡ ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸಿದರು. ಅಖಂಡ ಕರ್ನಾಟಕ ರಚನೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ತಾಯಿಗೆ ಸುಂದರ ಒಡವೆ ಮಾಡಿ ತೊಡಿಸಿದವರು ಲಿಗಾಡೆಯವರು. ಅವರದ್ದು ಶಿವಶರಣೆಯರ ಬದುಕಾಗಿತ್ತು. ಅವರ ಹುಟ್ಟೂರಾದ ಸೊಲ್ಲಾಪುರ ಕರ್ನಾಟಕದಲ್ಲಿ ವಿಲೀನವಾಗಬೇಕೆಂಬ ಕನಸು ಕನಸಾಗಿಯೇ ಉಳಿದಿದೆ. ಇಂತಹ ಅಪ್ರತಿಮ ಕನ್ನಡದ ಕಟ್ಟಾಳುವಿನ ಜನ್ಮ ಶತಮಾನೋತ್ಸವವನ್ನು ಯೋಗ್ಯರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವರಾಗಲೀ, ಸರ್ಕಾರವಾಗಲೀ ನಿರ್ಲಕ್ಷಿಸಿದ್ದು ಮಾತ್ರ ವಿಷಾದನೀಯ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು