ಪ್ರಳಯ
'ಮಹಾ- ಲಯ'
ಚರಾಚರಗಳೆಲ್ಲ ಪ್ರವಿಲಯವಾಗುವ ಪ್ರಕ್ರಿಯೆ
ಇದು ಎರಡು ವಿಧ. ಮಹಾ ಪ್ರಳಯ ಮತ್ತು ಅವಾಂತರ ಪ್ರಳಯ
ಎಲ್ಲವೂ ಎಕ್ಕುಟ್ಟೋದರೆ ಅದು ಮಹಾಪ್ರಳಯ. ಎಡವಟ್ಟುಗಳಿಂದಾಗುವ ಸಣ್ಣ ಸಣ್ಣ ಅವಾಂತರವೇ ಅವಾಂತರ ಪ್ರಳಯ
ಶಾಸ್ತ್ರಗಳ ಪ್ರಕಾರ ಗಾಢ ನಿದ್ರೆಯೂ ಒಂದು ತಾತ್ಕಾಲಿಕ ಪ್ರಳಯವೇ..
ಹೆಂಡತಿಯ ಹುಟ್ಟುಹಬ್ಬ ಮರೆತರೆ ಉಂಟಾಗುವ ಪರಿಣಾಮ
ಕದ್ದು ಮುಚ್ಚಿ ಮಾಡಿದ ಪ್ರಣಯ ಲೀಕ್ ಆದಾಗ..
ಕೆಲವು ವಲಯ ಲಾಭ ಗಳಿಸಲು ಆಗಾಗ ಪ್ರಸ್ತಾಪಿಸುವ ಸಂಗತಿ
ಸಾಲ ತೀರಿಸಲು ಸಾಧ್ಯವಾಗದವರೆಲ್ಲರ ಬಯಕೆ ಇದು
ಶಾಂತಿ
ಶಾಂತಿಗಾಗಿಯೇ ಜಗತ್ತಿನಲ್ಲಿ ಯುದ್ಧಗಳು ಸಂಭವಿಸುತ್ತಿರುವುದು
ಶಾಂತಿ ಬೇಕಿದ್ದರೆ ಶಾಂತಿಯನ್ನು ಮದುವೆಯಾಗದಿದ್ದರಾಯಿತು
ಶಾಂತಿಯನ್ನು ಪ್ರೀತಿಸುವವರೂ ಶಾಂತಿ ಪ್ರಿಯರೇ
ಶಾಂತಿ ಉಳ್ಳವನ ಮುಖದ ತುಂಬಾ ಕಾಂತಿ
ಗ್ರಹದೋಷ ನಿವಾರಣೆಗೆ ಮಾಡುವ ಹೋಮ
ಇದು ಯಾವುದರಲ್ಲಿದೆ ಎಂದು ತಿಳಿದನಿಗೆ ಇದು ಉಂಟು
ತಿಳಿವಳಿಕೆಯಿಂದ ಮನಸ್ಸು ತಿಳಿಗೊಂಡಾಗಿನ ಸ್ಥಿತಿ
ಬೇಕು ಬೇಕೆಂಬ ಬಯಕೆ ಬಿಟ್ಟಾಗ ಬೇಡವೆಂದರೂ ಸಿದ್ಧಿಸುವಂಥದ್ದು
-ವಿಶ್ವನಾಥ ಸುಂಕಸಾಳ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.