ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 5 Apr 2013, 12:48 pm

ಶೃಂಗೇರಿಯ ಮೆಣಸೆಯಿಂದ ಎಸ್.ವಿ. ಶ್ರೀನಿವಾಸಮೂರ್ತಿ ಅವರು ಬರೆಯುತ್ತಾರೆ- 'ಮಾ.28ರ ಕನ್ನಡಪ್ರಭದ ಹತ್ತನೇ ಪುಟದಲ್ಲಿ 'ದಿನದ ಅಚ್ಚರಿ'ಯಲ್ಲಿ ನೀಲಿ ತಿಮಿಂಗಿಲಗಳ ಬಗ್ಗೆ ವರ್ಣಿಸುತ್ತ ಗಾತ್ರದಲ್ಲಿ ಆನೆಯನ್ನೂ ಮೀರಿಸುವ ಜೀವಿಯೊಂದಿದ್ದರೆ ಅದು ನೀಲಿ ತಿಮಿಂಗಿಲ ಮಾತ್ರ ಎಂದು ಬರೆಯಲಾಗಿದೆ. ಆದರೆ ಇದು ಸಂಪೂರ್ಣ ತಪ್ಪು. ಏಕೆಂದರೆ ತಿಮಿಂಗಿಲಗಳಲ್ಲಿ ಡಾಲ್ಫಿನ್‌ಗಳೂ ಸೇರಿದಂತೆ ಸುಮಾರು ಎಂಬತ್ತೈದಕ್ಕೂ ಹೆಚ್ಚು ಪ್ರಭೇದಗಳಿದ್ದು ಅದರಲ್ಲಿ ಸುಮಾರು ಹತ್ತೊಂಬತ್ತು ಪ್ರಭೇದಗಳು ಆನೆಗಿಂತಲೂ ದೊಡ್ಡ ಗಾತ್ರದವು. ಈ ಕೆಳಗಿನ ಪಟ್ಟಿಯನ್ನು ಗಮನಿಸಿ.
1    ನೀಲಿ ತಿಮಿಂಗಿಲ- (Balaenoptera musculus) 100 ಅಡಿ ಉದ್ದ, 180 ಟನ್ ತೂಕ.
2    ಫಿನ್ ತಿಮಿಂಗಿಲ- Fin Whale (Balaenoptera physalus) 85 ಅಡಿ ಉದ್ದ, 100 ಟನ್ ತೂಕ.
3    ಸೇ ತಿಮಿಂಗಿಲ- Sei Whale (Balaenoptera borealis) 60 ಅಡಿ ಉದ್ದ, 33 ಟನ್ ತೂಕ.
4    ಬ್ರೈಡ್ ತಿಮಿಂಗಿಲ- Bride's Whale (Balaenoptera brydei) 50 ಅಡಿ ಉದ್ದ, 30 ಟನ್ ತೂಕ.
5    ಈಡನ್ ತಿಮಿಂಗಿಲ- Eden's Whale (Balaenoptera brydei) 45 ಅಡಿ ಉದ್ದ, 25 ಟನ್ ತೂಕ.
6    ಒಮುರಾ ತಿಮಿಂಗಿಲ- Omura Whale (Balaenoptera omurai) 35 ಅಡಿ ಉದ್ದ, 13 ಟನ್ ತೂಕ.
7    ಸಾಮಾನ್ಯ ಮಿಂಕ್ ತಿಮಿಂಗಿಲ- Common Minke Whale (Balaenoptera acutorostrata) 23 ಅಡಿ ಉದ್ದ, 9 ಟನ್‌ತೂಕ.
8    ಅಂಟಾರ್ಕ್ಟಿಕ್ ಮಿಂಕ್ ತಿಮಿಂಗಿಲ- Antarctic Minke Whale (Balaenoptera bonaerensis) 23 ಅಡಿ ಉದ್ದ, 9ಟನ್ ತೂಕ.
9    ಗೂನುಬೆನ್ನಿನ ತಿಮಿಂಗಿಲ- Humpback Whale (Megaptera novaengliae) 50 ಅಡಿ ಉದ್ದ, 36 ಟನ್ ತೂಕ.
10    ಬೌಹೆಡ್ ತಿಮಿಂಗಿಲ- Bowhead Whale (Balaena mysticetus)66 ಅಡಿ ಉದ್ದ, 120 ಟನ್ ತೂಕ.
11    ಉತ್ತರ ಅಟ್ಲಾಂಟಿಕ್ ತಿಮಿಂಗಿಲ -North Atlantic Right Whale (Eubalaena glacialis) 60 ಅಡಿ ಉದ್ದ, 100 ಟನ್ ತೂಕ.
12    ಉತ್ತರ ಪೆಸಿಫಿಕ್ ತಿಮಿಂಗಿಲ-North Pacific Right Whale (Eubalaena japonica) 60 ಅಡಿ ಉದ್ದ, 100 ಟನ್ ತೂಕ.
13    ದಕ್ಷಿಣ ರೈಟ್ ತಿಮಿಂಗಿಲ- Southern  Right Whale (Eubalaena australis) 60 ಅಡಿ ಉದ್ದ, 100 ಟನ್ ತೂಕ.
14    ಬೂದು ತಿಮಿಂಗಿಲ- Gray Whale (Eschrichtius robustus) 50 ಅಡಿ ಉದ್ದ, 40 ಟನ್ ತೂಕ.
15    ಪಿಗ್ಮಿ ರೈಟ್ ತಿಮಿಂಗಿಲ-Pygmy Right Whale (Capera marginata) 20 ಅಡಿ ಉದ್ದ, 3-4 ಟನ್ ತೂಕ.
16    ಚೌದಲೆ ತಿಮಿಂಗಿಲ- Sperm Whale (Physeter macrocephalus) 60 ಅಡಿ ಉದ್ದ, 55 ಟನ್ ತೂಕ.
17    ಬೈಯರ್ಡ್ ತಿಮಿಂಗಿಲ- Baird's Beaked Whale (Beradius bairdi) 39 ಅಡಿ ಉದ್ದ, 13 ಟನ್ ತೂಕ.
18    ಅರ್ನುಕ್ಸಿ ತಿಮಿಂಗಿಲ- Arnuxi's Beaked Whale (Berardius Arnuxii) 43 ಅಡಿ ಉದ್ದ, 14 ಟನ್ ತೂಕ.
19    ಓರ್ಕಾ ಅಥವಾ ಕೊಲೆಗಡುಕ ತಿಮಿಂಗಿಲ-  Killer Whale (Orcinus orca) 30 ಅಡಿ ಉದ್ದ, 10 ಟನ್ ತೂಕ.
ಮೇಲೆ ಹೇಳಲಾದ ತೂಕಗಳು ಅಂದಾಜು ಗಣನೆಗಳು. ತೂಕ ಅಥವಾ ಉದ್ದ ಎರಡನ್ನೂ ಖಚಿತವಾಗಿ ಇಷ್ಟೇ ಎಂದು ಹೇಳಲಾಗದು. ಈ ಅಳತೆಗಳಲ್ಲಿ 5-10ರ್  ವ್ಯತ್ಯಾಸಗಳು ಕಂಡು ಬರಬಹುದು. ಏಕೆಂದರೆ ಯಾವುದೇ ಜೀವ ಪ್ರಭೇದದಲ್ಲಿ ಕೆಲವು ಸ್ವಲ್ಪ ದೊಡ್ಡವು, ಇನ್ನು ಕೆಲವು ಚಿಕ್ಕವು ಇದ್ದೇ ಇರುತ್ತದೆ. ಆದರೆ ಇವೆಲ್ಲವೂ ಆನೆಗಳಿಗಿಂತ ಗಾತ್ರದಲ್ಲಿ ತುಂಬಾ ದೊಡ್ಡವು ಎಂಬುದರಲ್ಲಿ ಸಂಶಯವೇ ಇಲ್ಲ. ಪಿಗ್ಮಿ ರೈಟ್ ತಿಮಿಂಗಿಲವೊಂದನ್ನು ಬಿಟ್ಟು ಉಳಿದವುಗಳೆಲ್ಲ ತೂಕದಲ್ಲೂ ಆನೆಗಳನ್ನು ಮೀರಿಸುತ್ತವೆ' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement