ಅರ್ಜಿ ಹಾಕದೇ ಬರುವ, ನಮ್ಮೊಂದಿಗೆ ಇರುವ ವ್ಯಾಧಿಮೂಲ
ಗಳಿಸಿದ, ಸಂಪತ್ತಿಗೊಂದು ಗತಿ ಕಾಣಿಸುವ ರೋಗ
ಯಾವುದರ ಅಲರ್ಜಿಯಿದೆಯೊ ಅದನ್ನು ವರ್ಜಿಸುವುದೇ ಇದಕ್ಕೆ ಸರ್ಜರಿ
ಹಳೇ ವುಲ್ಲನ್ ಬಟ್ಟೆ ಒಮ್ಮೆ ಜೊರಾಗಿ ಝಾಡಿಸಿದಾಗಲೂ ಆಕ್ಷಿ ಬರಲಿಲ್ಲವೆಂದರೆ ನಿಮಗೆ ಧೂಳಿನ ಅಲರ್ಜಿಯಿಲ್ಲವೆಂದರ್ಥ
ಮೂಗಿನ ಸಂಬಂಧೀ ಅಲರ್ಜಿಗೆ ಮಾಗರ್ಜಿ ಎನ್ನಬಹುದು
ಹೆಂಡತಿಯನ್ನು ಸಹಿಸಿಕೊಂಡವರಿಗೆ ಯಾವ ಅಲರ್ಜಿಯೂ ಬಾಧಿಸುವುದಿಲ್ಲ
ಎನರ್ಜೆಟಿಕ್ ಆಗಿರಬೇಕೆಂದರೆ ಅಲರ್ಜೆಟಿಕ್‌ಗಳಿಂದ ದೂರವೇ ಇರಬೇಕು
ಅಲರ್ಜೆಟಿಕ್‌ಗಳಿಂದ ದೂರವೇ ಇರಬೇಕೆಂದರೂ ಯಾರೂ ಹುಡುಗೀರನ್ನು ದೂರಮಾಡುವುದಿಲ್ಲ
ಬಾಸ್‌ನಿಂದ ದೂರವಿದ್ದರೆ ಆದಷ್ಟು ಅಲರ್ಜಿಗಳಿಂದ ದೂರವಿರಬಹುದು
ನೀವು ಪ್ರಾಮಾಣಿಕರೂ ನಿಷ್ಠುರರೂ ಆಗಿದ್ದರೆ ಲೋಕಕ್ಕೇ ಅಲರ್ಜಿಗಳಾಗುತ್ತೀರಿ
ಜೀ...ಜೀ.. ಎಂದು ಬಕೆಟ್ ಹಿಡಿದ ಮನಸ್ಸು ಕೂಡ ಸಮಾಜಕ್ಕೆ ಅಲರ್ಜಿಯೇ
ಇದಕ್ಕೆ ಮಾತ್ರೆ ತೆಗೆದುಕೊಂಡರೂ ಮಾತ್ರವೂ ಕಡಿಮೆಯಾಗದು
ಕೆರೆತವನ್ನೂ ಕೊಟ್ಟು ಊತವನ್ನೂ ಉಂಟು ಮಾಡುವಂಥದ್ದು
ಗಾಳಿಯಲ್ಲಿ ಆಮ್ಲಜನಕ, ಸಾರಜನಕಗಳಲ್ಲದೇ 'ಅಲರ್ಜನ'ಕಗಳೂ ಇರುತ್ತದೆ
-ವಿಶ್ವನಾಥ ಸುಂಕಸಾಳ