ಭೂಮಿಯ ಸುತ್ತಲೆ ಗಿರಕಿ ಹೊಡೆವ ಗಿರಾಕಿ
ಹೆಂಡತಿಯ ಮುಖವನ್ನು ಹೋಲಿಸಲೆಂದೇ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿರುವ 'ಕಲಾ'ಧರ
ಕಳಂಕ ಹೊತ್ತರೂ ಬಿಂಕವ ತೋರುವ ಶಶಾಂಕ
ವಸುಮತಿಯ ಬಾಯ್‌ಫ್ರೆಂಡ್
ಹನಿ 'ಮೂನ್'ಗೊಂದು ಸುರಕ್ಷಿತ ತಾಣ
ಇಂದು ನಿನ್ನೆಯದಲ್ಲ 'ಇಂದು'ವಿನ ಬಗೆಗಿನ ಕುತೂಹಲ
ಸೂರ್ಯ ಮುಳುಗಿದ ಮೇಲೆ ಉದಯಿಸುವುದರಿಂದ ಇವನು ಸೂರ್ಯನ ಉತ್ತರಾಧಿಕಾರಿ. ಅಲ್ಲಲ್ಲ ಪಶ್ಚಿಮಾಧಿಕಾರಿ
ಕುಮುದಗಳ ಮುದಾಕರ. ಅದಕ್ಕೆ ಈತ ಕುಮುದಬಾಂಧವ
ಅಂಶುಮಾಲಿ, ಸುಧಾಂಶು, ಓಷಧೀಶ
ನಿಶಾಚರ ದಾರಿದೀಪ; ಅದಕ್ಕೆ ಈತ ನಿಶಾಪತಿ
ತಿಂಗಳಿಗೊಂದು ಬಾರಿ (ಅಮಾವಾಸ್ಯೆ ದಿನ) ಸಿ.ಎಲ್. ಹಾಕುವವ
ಭೂಮಿಯನ್ನೆಲ್ಲ ಗೋಳು ಹೊಯ್ದುಕೊಂಡ ಮನುಷ್ಯನ ಕಣ್ಣಿಗೆ ಬಿದ್ದಿರುವ ಅಮಾಯಕ
-ವಿಶ್ವನಾಥ ಸುಂಕಸಾಳ