ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬರ್ಬರ ಕಾಯಿದೆ ಪಾಲಕರು

Vishwanath S
Updated On : 17 Apr 2013, 11:05 am

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಆಡಳಿತಕ್ಕೆ ವರ್ಷಕ್ಕೂ ಹೆಚ್ಚು ಅವಧಿಯ ಅಧಿಕಾರದ ಅನುಭವವಾಗಿದೆ. ಈ ಅವಧಿಯಲ್ಲಿ ಜನರಲ್ಲೂ ಹೊಸ ಸರ್ಕಾರದ ವಿಚಾರದಲ್ಲಿದ್ದ ಅಭಿಮಾನ ಕುಗ್ಗುತ್ತಿದೆ. ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ ಚೇತರಿಸಿಕೊಂಡು ಸಭೆ - ಪ್ರದರ್ಶನಗಳನ್ನು ನಡೆಸುತ್ತಿದೆ.
ಈ ತಿಂಗಳ ಮೊದಲ ಭಾಗದಲ್ಲಿ ಕೋಲ್ಕತಾದಲ್ಲಿ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಏರ್ಪಡಿಸಿದ್ದ ಒಂದು ಪ್ರತಿಭಟನಾ ಪ್ರದರ್ಶನದಲ್ಲಿ ಹಿಂಸಾಚಾರ ನಡೆದಿದ್ದು ನಿಜ. ಆ ಸಂದರ್ಭದಲ್ಲಿ ಪೊಲೀಸರು ಸಂಘಟನೆಯ ಸಕ್ರಿಯ ಕಾರ್ಯಕರ್ತ ಸಂತೋಷ ಸಹಾನಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದರು. ಜೈಲಿನಲ್ಲಿ ಸಂತೋಷ ಸಹಾನಿಗೆ ಅನಾರೋಗ್ಯದ ಲಕ್ಷಣಗಳು ಕಂಡು ಬಂದಾಗ, ಅವರನ್ನು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆ ಸಂದರ್ಭದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಹಾನಿಯ ಕಾಲನ್ನು ಮಂಚಕ್ಕೆ ಕೈಕೋಳದ ನೆರವಿನಿಂದ ಕಟ್ಟಿಹಾಕಲಾಗಿತ್ತು. ಖಂಡಿತವಾಗಲೂ ಇದು ಬರ್ಬರ ಪೊಲೀಸ್ ವರ್ತನೆ. ಆಸ್ಪತ್ರೆಗೆ ಬಂದವರಲ್ಲಿ ಅನೇಕರು ಹಾಗೂ ಮಾರ್ಕ್ಸ್‌ವಾದೀ ಕಮ್ಯುನಿಸ್ಟ್ ಪಾರ್ಟಿ ಪ್ರತಿಭಟಿಸಿದ ಅನಂತರ ಮಂಚದ ಕಾಲಿಗೆ ಹಾಕಿದ್ದ ಕೋಳವನ್ನು ತೆಗೆಯಲಾಯಿತು. ಈಗಲೂ ಕೋಲ್ಕತಾದಂತಹ ಮಹಾನಗರದಲ್ಲಿ ಇಂತಹ ಘಟನೆ ನಡೆಯುವುದು ಸಾಧ್ಯ ಎನ್ನುವುದಾದರೆ, ಭಾರತ ಇನ್ನೂ ತನ್ನ ಬರ್ಬರ ಪರ್ವದಿಂದ ಹೊರಗೆ ಬಂದಿಲ್ಲ ಎಂದೇ ಹೇಳಬೇಕು. ಈ ಬರ್ಬರ ಕೃತ್ಯಕ್ಕೆ ಯಾರೇ ಹೊಣೆಗಾರರಾಗಿರಲಿ, ಅವರು ಖಂಡನೆಗೆ ಅರ್ಹರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement