ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಭೂ ಸ್ವಾಧೀನ: ಒಮ್ಮತ ಸಾಧ್ಯ

Vishwanath S
Updated On : 19 Apr 2013, 9:12 am

ಈಗ ಜಾರಿಯಲ್ಲಿರುವ 1891ರ ಭೂ ಸ್ವಾಧೀನ ಕಾಯಿದೆಯನ್ನು ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಬದಲಾಯಿಸುವ ಪ್ರಕ್ರಿಯೆಯಲ್ಲಿ ತೃಪ್ತಿಕರವಾದ ರೀತಿಯ ಪ್ರಗತಿ ಕಂಡು ಬಂದಿರುವುದು ಸ್ವಾಗತಕ್ಕೆ ಅರ್ಹ. ರೈತರ ಹಿತ ರಕ್ಷಣೆಗೆ ಒಳ್ಳೆಯದು.
ಗುರುವಾರ ದೆಹಲಿಯಲ್ಲಿ ನಡೆದ ಭೂ ಸ್ವಾಧೀನ ಕಾಯಿದೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಮಿತಿಯಲ್ಲಿ, ಸರ್ಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾಸ್ವರಾಜ್ ಅವರಿಬ್ಬರೂ ಒಮ್ಮತ ಸಾಧ್ಯ ಎಂದು ಭಾವಿಸಿದ್ದಾರೆ. ಪ್ರತಿಪಕ್ಷಗಳು ಮುಂದಿಟ್ಟ ಕೆಲವು ಪ್ರಮುಖ ಸಲಹೆಗಳನ್ನು ಸರ್ಕಾರ ಒಪ್ಪಿಕೊಂಡಿದ್ದೇ ಈ ಆಶಾವಾದಕ್ಕೆ ಕಾರಣ.
ಕಾಯಿದೆಯ ಮಾರ್ಪಾಡಿನಲ್ಲಿ ಅತಿ ಮುಖ್ಯವಾದ ವಿಚಾರವೆಂದರೆ ಭೂ ಸ್ವಾಧೀನ ಅಥವಾ ಭೂಮಿಯನ್ನು ಗುತ್ತಿಗೆಗೆ ಕೊಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿರುವುದು. ಉದ್ಯಮಗಳ ಸ್ಥಾಪನೆ ಹಾಗೂ ವಿಸ್ತರಣೆಗೆ ಈಗ ದೇಶದ ಅನೇಕ ಭಾಗಗಳಲ್ಲಿರುವ ಬಹು ದೊಡ್ಡ ಸಮಸ್ಯೆ ಎಂದರೆ ಭೂಮಿಯದ್ದೇ. ಈಗಿನ ರಾಜಕೀಯ- ಸಾಮಾಜಿಕ ವಾತಾವರಣದಲ್ಲಿ ಭೂಮಿಯನ್ನು ರೈತರಿಂದ ಬಲಾತ್ಕಾರವಾಗಿ ವಶಪಡಿಸಿಕೊಳ್ಳುವುದು ಅಸಾಧ್ಯವೇ.
ಆದರೆ ಆಳುವ ಕೂಟದ ಪ್ರತಿನಿಧಿಗಳು ಹಾಗೂ ಪ್ರತಿಪಕ್ಷಗಳ ಪ್ರತಿನಿಧಿಗಳ ನಡುವೆ ಆದ ವಿಚಾರ ವಿನಿಮಯದ ಅನಂತರ ಹೊರಬಿದ್ದ ಒಟ್ಟಾರೆ ಅಭಿಪ್ರಾಯದ ವಿವರಗಳು ಉದ್ಯಮಿಗಳು, ಪ್ರಾತಿನಿಧಿಕ ಸಂಸ್ಥೆಗಳ ವಕ್ತಾರರಿಗೆ ಒಪ್ಪಿಗೆಯಾದಂತಿಲ್ಲ. ಅವರ ಪ್ರಕಾರ ಭೂಮಿಯನ್ನ ವಶಪಡಿಸಿಕೊಳ್ಳುವ ಪ್ರಕ್ರಿಯೆ ಇನ್ನು ಮುಂದೆ ಮೂರು ವರ್ಷಗಳಾದರೂ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಲ್ಲಿ ಅಂತಿಮ ತೀರ್ಮಾನ ಸಂಸತ್ತಿನದ್ದೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement