ಒಮ್ಮೆ ಮನುಷ್ಯ ಕೋಗಿಲೆಗೆ ಹೇಳಿದ: ನೀನು ಕಪ್ಪಗಿಲ್ಲದಿದ್ದರೆ ಎಷ್ಟು ...
ಒಮ್ಮೆ ಮನುಷ್ಯ ಕೋಗಿಲೆಗೆ ಹೇಳಿದ: ನೀನು ಕಪ್ಪಗಿಲ್ಲದಿದ್ದರೆ ಎಷ್ಟು ಸುಂದರವಾಗಿ ಕಾಣುತ್ತಿದ್ದೆ!
ಸಮುದ್ರಕ್ಕೆ ಹೇಳಿದ: ನಿನ್ನ ನೀರಿನಲ್ಲಿ ಉಪ್ಪಿನಂಶ ಇಲ್ಲದಿದ್ದರೆ ಎಷ್ಟು ಚೆನ್ನಾಗಿತ್ತು?
ಗುಲಾಬಿ ಹೂವಿಗೆ ಹೇಳಿದ: ನಿನ್ನಲ್ಲಿ ಮುಳ್ಳುಗಳಿಲ್ಲದಿದ್ದರೆ ಇನ್ನಷ್ಟು ಸುಂದರವಾಗಿರುತ್ತಿದ್ದೆ!
ಆಗ ಅವು ಉತ್ತರಿಸಿದವು: ಹೇ ಮನುಷ್ಯ, ಇನ್ನೊಬ್ಬರಲ್ಲಿರುವ ದೋಷಗಳನ್ನು ಹುಡುಕುವ ಚಟ ನಿಲ್ಲಲ್ಲಿ ಇಲ್ಲದಿದ್ದರೆ, ನೀನು ಎಷ್ಟು ಒಳ್ಳೆಯವನಾಗಿರುತ್ತಿದ್ದೆ!
---
ಫಂಟಾ ತನ್ನ ಗರ್ಲ್ಫ್ರೆಂಡ್ ಹುಟ್ಟಿದ ದಿನವನ್ನು ಮರೆತುಬಿಟ್ಟ. ಅದಕ್ಕೆ ಆತ ನೀಡಿದ ಸಮಜಾಯಿಷಿ: ನಿನ್ನ ಬರ್ತ್ಡೇ ಅಂತ ನನಗೆ ಗೊತ್ತಾಗುವುದಾದರೂ ಹೇಗೆ ಚಿನ್ನಾ? ವರ್ಷ ಹೆಚ್ಚಾದವಳಂತೆ ನೀನು ಕಾಣುವುದೇ ಇಲ್ಲ!
----
ಬಂತಾ- ಈ ಬಾರಿ ನಾನು ಬರೆದಿದ್ದನ್ನು ಆ ಪತ್ರಿಕೆಯವರು ತಿರಸ್ಕರಿಸುವುದಕ್ಕೆ ಸಾಧ್ಯವೇ ಇಲ್ಲ.
ಸಂತಾ- ಏನು ಬರೆದಿದ್ದೀ?
ಬಂತಾ- ವಾರ್ಷಿಕ ಚಂದಾದಾರನಾಗಲು ಚೆಕ್ ಬರೆದು ಕಳುಹಿಸಿದ್ದೇನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.