ಚುಂಬನದಿಂದ ಕೋಪಕ್ಕೆ ನಿವೃತ್ತಿ, ಆಲಿಂಗನದಿಂದ?
ಫ್ಯಾಷನ್ ಡಿಸೈನರ್ ಮಧು, 9945737427
ಚುಂಬನದಿಂದ ಕೋಪಕ್ಕೆ ನಿವೃತ್ತಿ, ಆಲಿಂಗನದಿಂದ?
ದೇಹಕ್ಕೆ ವೃತ್ತಿ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಸವಿ ನೆನಪುಗಳೇ ಹೆಚ್ಚಾದರೆ ಏನಾಗುತ್ತದೆ?
ಶುಗರ್ ಬರುತ್ತದೆ!
ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ತಾಯಿಗೆ ಮಗನ ಮೇಲೆ ಪ್ರೀತಿ. ಮಗನಿಗೆ ಯಾರ ಮೇಲೆ ಪ್ರೀತಿ?
ತನ್ನ ಮಕ್ಕಳ ತಾಯಿಯಾಗುವವಳ ಮೇಲೆ!
ವಿಷ್ಣುಶಂಕರ್, ಶಿವಮೊಗ್ಗ
ನೀರಿನ ಸೆಳೆತಕ್ಕೂ ನಾರಿಯ ಸೆಳೆತಕ್ಕೂ ಏನು ವ್ಯತ್ಯಾಸ?
ನೀರಿನ ಸೆಳೆತಕ್ಕೆ ಸಿಕ್ಕರೆ ಹೆಣವಾಗಿ ತೇಲುತ್ತಾರೆ. ಹೆಣ್ಣಿನ ಸೆಳೆತಕ್ಕೆ ಸಿಕ್ಕರೆ ಸುಖದಲ್ಲಿ ತೈಲುತ್ತ, ದುಃಖದಲ್ಲಿ ಮುಳುಗುತ್ತ ಇರಬೇಕಾಗುತ್ತದೆ.
ಕೆನ್ನಾಳು ಭಾಸ್ಕರ, 9036416729
ಬೇರೆಯವರ ಹೆಂಡತಿ ಜತೆ ಚೆನ್ನಾಗಿರುತ್ತೇವಲ್ಲ ಯಾಕೆ?
ಹಿತ್ತಲ ಗಿಡ ಮದ್ದಲ್ಲ, ಮನೆಯಲ್ಲಿರುವ ಹೆಂಡತಿ ಮುದ್ದಲ್ಲ!
ಬಾಣಭಟ್ಟ