ಹುಡುಗ: ಐ ಲವ್ ಯು...
ಹುಡುಗ: ಐ ಲವ್ ಯು
ಹುಡುಗಿ: ಆದ್ರೆ ನಾನು ಬೇರೇ ಹುಡುಗನನ್ನು ಲವ್ ಮಾಡ್ತಾ ಇದೀನಿ. ಕ್ಷಮಿಸು
ಹುಡುಗ: ಏನೂ ತೊಂದರೆ ಇಲ್ಲ. ನಿನ್ನ ಪ್ರೀತಿಗಿಂತ ನನಗೆ ನಿನ್ನ ಸಂತೋಷ ಮುಖ್ಯ!
(ನೀತಿ: ಏನೂ ಮಾಡೋದಕ್ಕೆ ಆಗದೆ ಇರೋ ಸಂದರ್ಭದಲ್ಲಿ ಸಿನೆಮಾ ಡೈಲಾಗ್ ಹೊಡೆದು ಒಳ್ಳೆಯವನಂತೆ ಪೋಸು ಕೊಡುವುದು ಒಳಿತು!)
----
ಸುಂದರ ಸೆಕ್ರೆಟರಿಯೊಬ್ಬಳು ಬಾಸ್ನ ಛೇಂಬರ್ನಿಂದ ಗೊಣಗುತ್ತಾ ಹೊರಬಂದಳು.
ಗೆಳತಿ: ಯಾಕೆ ಇಷ್ಟು ಸಿಟ್ಟಾಗಿದೀಯಾ ಏನಾಯ್ತು?
ಸೆಕ್ರೆಟರಿ: ಇವತ್ತು ರಾತ್ರಿ ಫ್ರೀ ಇದೀಯಾ ಅಂತ ಬಾಸ್ ಕೇಳಿದ್ರು!
ಗೆಳತಿ(ಗಾಬರಿಯಿಂದ): ಆಮೇಲೇ?
ಸೆಕ್ರೆಟರಿ: ಫ್ರೀ ಇದೀನಿ ಸರ್ ಅಂದೆ...
ಗೆಳತಿ(ಇನ್ನಷ್ಟು ಗಾಬರಿಯಿಂದ): ಆಮೇಲೇ?
ಸೆಕ್ರೆಟರಿ: 50 ಪುಟಗಳಷ್ಟು ನೋಟ್ಸ್ ಕೊಟ್ಟು, ರಾತ್ರಿಯೆಲ್ಲ ಟೈಪ್ ಮಾಡು ಅಂತ ಹೇಳಿದ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.