ಹೆಣ್ಣಿನ ಸೌಂದರ್ಯವನ್ನು ಹಣತೆಯ ಬೆಳಕಿನಿಂದ ನೋಡಲು ಸಾಧ್ಯವೇ?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹೆಣ್ಣಿನ ಸೌಂದರ್ಯವನ್ನು ಹಣತೆಯ ಬೆಳಕಿನಿಂದ ನೋಡಲು ಸಾಧ್ಯವೇ?
ಕ್ರಿಕೆಟ್ ಪಂದ್ಯವನ್ನು ಬ್ಯಾಟರಿ ಬೆಳಕಿನಲ್ಲಿ ನಡೆಸಲು ಸಾಧ್ಯವೇ?
ವಿಷ್ಣುಶಂಕರ್, ಶಿವಮೊಗ್ಗ
ನನ್ನಾಕೆಗೆ ಟೊಮೆಟೊದಂತ ಕೆನ್ನೆಯವಳೆ ಎಂದರೆ ಸಿಡುಕುತ್ತಾಳಲ್ಲ?
ಟೊಮೆಟೊಗೆ ಕಡಿಮೆ ರೇಟಲ್ವಾ ಅದಿಕ್ಕೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ದೇವರು ರಾಜಕೀಯ ನಾಯಕರ ಹಣೆಬರಹವನ್ನು ಎಲ್ಲಿ ಬರೆದಿದ್ದಾನೆ?
ಮತದಾರರ ಕೈಯಲ್ಲಿ.
ಮಂಜುನಾಥ, ಚಿನಕುರಳಿ, 9164883467
ಇಲ್ಲೊಬ್ಬಳು ನನ್ನನ್ನ 'ರಸಿಕ' ಅಂತ ಕರೀತಾಳಲ್ಲ. ನನ್ನಲ್ಲಿ ಏನು ಕಂಡಿರಬಹುದು?
ಏನೂ ಕಾಣದೇ ನಿನ್ನನ್ನು ಕಿಚಾಯಿಸಲು ಹಾಗೆ ಕರೆದಿರಲೂ ಸಾಕು!
ಜಗದೀಶ ಎಸ್., ಬೆಳಗಾವಿ, 8722444410
ವನದಲ್ಲಿ ಕಂಡ ಹುಡುಗಿಯನ್ನು ಏನೆಂದು ಕರೆಯಲಿ?
ವನಜ!
ಬಾಣಭಟ್ಟ