ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಇದು ಉತ್ತಮ ಆಡಳಿತವಲ್ಲ

Mainashree
Updated On : 8 Aug 2013, 10:41 am

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರವನ್ನು ವಹಿಸಿಕೊಂಡು ಸುಮಾರು ತೊಂಬತ್ತು ದಿನಗಳೇ ಸಂದಿವೆ. ಇನ್ನೇನು ಶ್ರಾವಣದ ಮಧ್ಯಭಾಗದಲ್ಲಿ ನೂತನ ಸರ್ಕಾರದ ನೂರನೇ ದಿನವನ್ನು ಸಂಭ್ರಮದಿಂದ ಆಚರಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ.
ಆದರೆ ಸರ್ಕಾರ ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಮಾಡಲೇ ಬೇಕಾಗಿದ್ದ ಸಾಮಾನ್ಯ ಕೆಲಸವನ್ನೂ ಮಾಡದೇ ಇರುವುದು ನಿಜಕ್ಕೂ ವಿಷಾದದ ಸಂಗತಿ.
ರಾಜ್ಯದಲ್ಲಿ ಈಗ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಂತಹ ಸಂಸ್ಥೆಗಳಿಗೆ ಸರ್ಕಾರ, ಅಧ್ಯಕ್ಷರನ್ನೇ ನೇಮಿಸಿಲ್ಲ. ಹೀಗಾಗಿ ಹಿಂದಿನ ಸರ್ಕಾರಗಳು ಪ್ರಾಮುಖ್ಯ ಎಂದು ಪರಿಗಣಿಸಿದ್ದ ಮಾನವ ಹಕ್ಕುಗಳ ರಕ್ಷಣೆ, ಮಹಿಳೆಯರ ಕ್ಷೇಮಾಭಿವೃದ್ಧಿ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿಯ ಕೆಲಸ ಕುಂಠಿತವಾಗಿದೆ ಎಂದೇ ಅರ್ಥ. ನಿಜ. ಮಾಮೂಲಿನಂತೆ ಬಜೆಟ್‌ನಲ್ಲಿ ಅಳವಡಿಸಲಾಗಿರುವ ವ್ಯವಹಾರವನ್ನು ಅಧಿಕಾರಿಗಳೇ ನಿರ್ವಹಿಸಬೇಕು. ಕೆಲವು ಅಧಿಕಾರಿಗಳು ಹಾಗೆ ಮಾಡಿರಬಹುದು.
ಇಲ್ಲಿ ಇತರ ಅನೇಕ ಬೋರ್ಡು, ನಿಗಮ, ಮಂಡಳಿಗಳಿಗೆ ಆಗಬೇಕಾದ ನೇಮಕಗಳನ್ನು ಪ್ರಸ್ತಾಪಿಸುತ್ತಿಲ್ಲ. ಅಲ್ಲಿ ರಾಜಕೀಯ ಪ್ರವೇಶವಾಗಬಹುದು. ಜಾತಿಯ ಪ್ರಶ್ನೆ ಬರಬಹುದು. ಇನ್ನೂ ಅನೇಕ ವಿಷಯಗಳು ಪರಿಗಣನೆಗೆ ಬರಬಹುದು.
ಆದರೆ ಮಾನವ ಹಕ್ಕುಗಳ ರಕ್ಷಣೆಯ ಆಯೋಗಕ್ಕೆ ಅಧ್ಯಕ್ಷರೇ ಇಲ್ಲದಿದ್ದರೆ, ಅದು ದೂರುಗಳನ್ನು ದಾಖಲಿಸಿಕೊಳ್ಳುವ ಕಾರ್ಯಾಲಯವಾಗುತ್ತೆ ಅಷ್ಟೇ.
ಈ ಮೂರೂ ಆಯೋಗಗಳು, ಸರ್ಕಾರದ ಸಾಮಾಜಿಕ ನ್ಯಾಯ ವಿತರಣೆಯ ಕಾರ್ಯಕ್ರಮದಲ್ಲಿನ ಪ್ರಮುಖ ಸ್ಥಂಭಗಳೇ. ಸಾಮಾಜಿಕ ನ್ಯಾಯ ವಿತರಣೆಯ ದೃಷ್ಟಿಯಿಂದಲಾದರೂ ಈ ಸಂಸ್ಥೆಗಳು ಸೊರಗುವಂತೆ ಮಾಡಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement