ಕಾಮಕ್ಕಾಗಿಯೇ ಪ್ರೇಮ. ಈ ಮಾತನ್ನು ಒಪ್ಪಬಹುದಾ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಕಾಮಕ್ಕಾಗಿಯೇ ಪ್ರೇಮ. ಈ ಮಾತನ್ನು ಒಪ್ಪಬಹುದಾ?
ನಿಮ್ಮಂತಹ ಅನುಭವಸ್ಥರ ಮಾತನ್ನು ಅಲ್ಲಗಳೆಯುವುದು ಕಷ್ಟ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಪ್ರೇಮಿಗಳಿಗೆ ಬೆಳಕಿಗಿಂತ ಕತ್ತಲೆಯೇ ಸೂಕ್ತವಲ್ಲವೇ?
ಅವರು ಹೇಗೆ ಪ್ರೀತಿಸುತ್ತಾರೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ.
ಮಂಜುಳಾ, ಚಿತ್ರದುರ್ಗ
ಗೊರೂರು ನಾಗನನ್ನು ಸಕಲ ಕಲಾವಲ್ಲಭ ಅಂತಲೂ ಕರೆಯಬಹುದಲ್ವಾ?
ಸದ್ಯ ಅವರು 'ನಾಗ'ರಪಂಚಮಿಯಲ್ಲಿ ಬ್ಯೂಸಿ.
ಎಸ್. ಭಗವತಿ, ಗೊರೂರು
ಅನ್ನಭಾಗ್ಯ-ಕ್ಷೀರಭಾಗ್ಯ- ಆರೋಗ್ಯಭಾಗ್ಯ ಆಯ್ತು. ಮುಂದೆ?
ಸಾರಾಯಿಭಾಗ್ಯ!
ಅತುಲ ಬಾರಧ್ವಾಜ, ತಿಂಡ್ಲು, ಬೆಂಗಳೂರು
'ಚಿನ್ನ ನಿನ್ನ ಮುದ್ದಾಡುವೆ' ಅಂದಿದ್ದೆ. 'ಬಾ ನಲ್ಲ ಮಧುಚಂದ್ರಕೆ' ಅಂತಾಳಲ್ಲ?
ಪುಣ್ಯ. ಮುಟ್ಟಿದರೆ ತಟ್ ಬಿಡ್ತೀನಿ ಅಂದಿಲ್ವಲ್ಲ.
ಬಾಣಭಟ್ಟ