ಚಿಗುರು ಮೀಸೆ ಹುಡುಗರಿಗೆ ಆಸೆಗಳು ಹೆಚ್ಚಂತೆ?
ಮಂಜುಳಾ, ಚಿತ್ರದುರ್ಗ
ಚಿಗುರು ಮೀಸೆ ಹುಡುಗರಿಗೆ ಆಸೆಗಳು ಹೆಚ್ಚಂತೆ?
ಆಸೆಗಳು ಕೂಡ ಚಿಗುರುವ ಕಾಲ.
ಎಸ್. ಭಗವತಿ, ಗೊರೂರು
ಹೆಣ್ಣುಮಕ್ಕಳು ಮಾತ್ರ ಬೇಗ ಬೆಳೆದು ದೊಡ್ಡವರಾಗಿಬಿಡುತ್ತಾರಲ್ಲ?
ಹೆಣ್ಣು ಮಕ್ಕಳು ಬೆಳೆದಿದ್ದು ಬೇಗ ಕಾಣುತ್ತದೆ.
ಅತುಲ ಭಾರಧ್ವಾಜ, ತಿಂಡ್ಲು, ಬೆಂಗಳೂರು
'ನೋಡ್ತಾ ಇರಿ ಏನೇನ್ ಮಾಡ್ತೀವಿ' ಮುಂದಿನ ಸರಣಿ ಯಾವಾಗ?
ನೋಡ್ತಾ ಇರಿ!
ಗೊರೂರು ನಾಗ, 9480783803
ಅವಳದ್ದು ಗುರಿ ಮುಟ್ಟಿದ ಕೂಡಲೇ ಏಣಿ ಒದೆಯೋ ಬುದ್ದಿಯಿದೆಯಲ್ಲಾ?
ಗುರಿ ತಲುಪಲು ಬಿಡಬೇಡ!
ಸಂತೆಬೆನ್ನೂರು ಫೈಜ್ನಟ್ರಾಜ್
ಅನ್ನ ಭಾಗ್ಯ ಏನೋ ಸರಿ. ಅದಕ್ಕೆ ಸಾಂಬಾರ್ ಬೇಳೆ ಇಲ್ಲವೇ?
ಅದು ಮುಂದಿನ ಸರ್ಕಾರಕ್ಕಿರುವ ಅವಕಾಶ.
ಬಾಣಭಟ್ಟ