ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 9 Aug 2013, 10:21 am

ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಆ.9ರಂದು ಮುಖಪುಟದಲ್ಲಿ 'ಪಾಕ್ ಸೈನಿಕರದ್ದೇ ಕೃತ್ಯ' ಶೀರ್ಷಿಕೆಯ ಅಡಿಯ ಚಿತ್ರದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಹುತಾತ್ಮ ಯೋಧ 'ಕುಂಡಲೀಕ ಮಾನೆಯವರ' ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ಚಿತ್ರ ಪ್ರಕಟಿಸಿದ್ದೀರಿ. ಆದರೆ ಯೋಧನ ಹೆಸರು 'ಕುಂಡಲೀಕ ಮಾನೆ' ಎಂಬುದರ ಬದಲಾಗಿ 'ಪುಂಡಲೀಕ ಮಾನೆ' ಇದ್ದಿರಬೇಕೆಂದು ಭಾವಿಸುತ್ತೇನೆ.'
'ಪುಟ 5ರಲ್ಲಿ 'ಉದ್ಯಾನನಗರಿಯಾಗಲು ಮರೀಗೌಡರೇ ಕಾರಣ' ವರದಿಯಲ್ಲಿ 'ಎಚ್.ಎನ್. ಮರೀಗೌಡ' ಎಂದಿದೆ. ಆದರೆ ಅವರು 'ಎಂ.ಎಚ್. ಮರೀಗೌಡ'. ಪ್ರಾಯಶಃ ವರದಿ ಮಾಡುವವರು ಬೆಂಗಳೂರಿನ ಮಾಜಿ ಶಾಸಕ ಎಚ್.ಎನ್. ನಂಜೇಗೌಡ ಎಂದು ಭಾವಿಸಿರಬೇಕು.'
'ಪುಟ 10ರಲ್ಲಿ 'ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ' ವರದಿಯಲ್ಲಿ 'ಒಂದು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು' ಎಂದಿದೆ. ಆದರೆ ಸಾಮಾನ್ಯವಾಗಿ ಗೌರವ ಸೂಚಿಸಲು ಮೂರು ಸುತ್ತು ಗುಂಡು ಹಾರಿಸುತ್ತಾರಲ್ಲವೇ?' ಎಂದಿದ್ದಾರೆ.
ಆ.7ರ ಪತ್ರಿಕೆಯ ಮುಖಪುಟದಲ್ಲಿ ಪಾಕ್ ದಾಳಿಯಲ್ಲಿ ಹುತಾತ್ಮರಾದ ಮರಾಠಾ ಲಘು ಪದಾತಿ ದಳದ ಯೋಧನ ಬಗ್ಗೆ ಪ್ರಕಟಿಸಿದ ಸುದ್ದಿಯಲ್ಲಿ ಯೋಧನ ಹೆಸರು 'ಕುಂಡಲಿಕ' ಅಂತ ಪ್ರಕಟವಾಗಿದೆ ಎಂದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಶಿವಪ್ಪ ಕೋರೆ ಅವರು ಕೂಡ ಪತ್ರ ಬರೆದಿದ್ದರು. ಅದನ್ನು ಇದೇ ಅಂಕಣದಲ್ಲಿ ಪ್ರಕಟಿಸಲಾಗಿತ್ತು.
ನಾನು ಕೂಡ ಹುತಾತ್ಮ ಯೋಧನ ಹೆಸರು ಪುಂಡಲೀಕ ಎಂದೇ ಇರಬಹುದು ಎಂದು ಭಾವಿಸಿದ್ದೆ. ಆದರೆ ಮೃತ ಯೋಧನ ಹೆಸರು 'ಕುಂಡಲೀಕ' ಎಂದೇ ಇದೆ. ಪಿಟಿಐ ಸಂಸ್ಥೆ ಕೂಡ ಸುದ್ದಿಗಳಲ್ಲಿ ಇದೇ ಹೆಸರನ್ನು ಬಳಸುತ್ತಿದೆ. ಆದ್ದರಿಂದ ಇದರಲ್ಲಿ ತಪ್ಪೇನೂ ಆಗಿಲ್ಲ ಅಂದುಕೊಳ್ಳುತ್ತೇನೆ.
ಬೆಂಗಳೂರಿನ ವಿಜಯನಗರದಿಂದ ಬೊ.ನಾ. ಕೃಷ್ಣಮೂರ್ತಿಯವರು ಬರೆಯುತ್ತಾರೆ- 'ರಾಧಾಕೃಷ್ಣ ಭಡ್ತಿಯವರ ಪ್ರವಾಹಕಥನ ಅದ್ಭುತವಾಗಿ ಮೂಡಿಬರುತ್ತಿದೆ. ಭಾಗ 9ರಲ್ಲಿ (ಆ.8ರಂದು ಪ್ರಕಟವಾದ) ಒಂದೆರಡು ಸಂಗತಿಗಳ ಬಗ್ಗೆ ಹೇಳಬೇಕಿದೆ. ಲೇಖನದಲ್ಲಿ ಒಂದು ಕಡೆ 'ಇಷ್ಟಕ್ಕೂ ಈ ರಸ್ತೆ ಇರುವುದು ಎರಡು, ಎರಡೂವರೆ ಸಾವಿರ ಕಿ.ಮೀ. ಎತ್ತರದಲ್ಲಿ' ಎಂದಿದೆ. ಇದು ನಿಜವಾ? ಜಗತ್ತಿನ ಯಾವುದೇ ಭಾಗದಲ್ಲಿ ಸಮುದ್ರ ಮಟ್ಟದಿಂದ ಇಷ್ಟು ಎತ್ತರದಲ್ಲಿ ಯಾವುದಾದರೂ ರಸ್ತೆ ಇರುವುದು ಸಾಧ್ಯವಾ?'
'ನಮ್ಮ ದೇಶದ ಹಲವಾರು ಊರುಗಳ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಬರೆಯುವಾಗ ಪದದ ಮಧ್ಯದಲ್ಲೋ, ಕೊನೆಯಲ್ಲೋ ರೋಮನ್ ಲಿಪಿಯ ಖಏ ಬಂದಿದ್ದರೆ ಆ ಜೋಡಿ ಅಕ್ಷರಗಳನ್ನು ಧ್ವನಿಸುವುದು 'ರ್‌' ಎಂದಲ್ಲ.  ಬದಲಿಗೆ 'ಡ್‌' ಎಂದು. ಕೆಲವೊಮ್ಮೆ 'ಡ್‌' ಅಕ್ಷರದ ಅಲ್ಪಪ್ರಾಣ ರೂಪವೂ ಇರಬಹುದು. ಹಿಂದಿ ಭಾಷೆಯಲ್ಲಿ 'ಗಢ್‌' ಪದದ 'ಢ್‌' ಸ್ವಲ್ಪ ಭಿನ್ನವಾಗಿ ಧ್ವನಿಸುವ ಕಾರಣದಿಂದ ಇದರ ಕೆಳಗೆ ಅಥವಾ ಆಗ್ನೇಯ ಮೂಲೆಯಲ್ಲಿ ಒಂದು ಚುಕ್ಕೆಯನ್ನು ಇಡುವ ಪದ್ಧತಿಯಿದೆ. ಹಾಗಾಗಿ ಎಆಖಏಗಿಆಔ ಎಂಬುದು ಗಢವಾಲ್ ಅಥವಾ ಗಢ್ವಾಲ್ ಹೊರತೂ 'ಘರವಾಲ್‌' ಅಲ್ಲ' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement