ಬಾಯಾರಿಕೆಯಾದರೆ ನೀರಿನ ಬದಲು ಲಿಮ್ಕಾ ಕುಡಿಯಬೇಕು...
ಟಿ.ವಿ ಜಾಹೀರಾತುಗಳು ನಮಗೆ ಕಲಿಸುವುದು:
- ಬಾಯಾರಿಕೆಯಾದರೆ ನೀರಿನ ಬದಲು ಲಿಮ್ಕಾ ಕುಡಿಯಬೇಕು.
- ಲೈಫ್ಬಾಯ್ ಮತ್ತು ಡೆಟಾಲ್ 99.9 ಪ್ರತಿಶತ ಕೀಟಾಣುಗಳನ್ನು ಕೊಲ್ಲುತ್ತವೆ. ಇನ್ನುಳಿದ 0.1 ಪ್ರತಿಶತ ಕೀಟಾಣುಗಳನ್ನು ಪ್ರಜನನಕ್ಕಾಗಿ ಬಿಟ್ಟುಬಿಡುತ್ತವೆ.
- ಹುಡುಗಿಯನ್ನು ಪಟಾಯಿಸುವುದಕ್ಕೆ ಒಳ್ಳೆಯ ನೌಕರಿಯೇ ಬೇಕಿಲ್ಲ. ಸ್ಪ್ರೈಟ್ ಕುಡಿದರೂ ಸಾಕು!
- ಯಾರದ್ದಾದರೂ ಟೂತ್ಪೇಸ್ಟ್ನಲ್ಲಿ ಉಪ್ಪು ಇದೇಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ನೀವು ಅವರ ಅನುಮತಿ ಇಲ್ಲದೆಯೇ ಅವರ ಬಾತ್ರೂಮ್ಗೆ ನುಗ್ಗಬಹುದು.
- ಮೌಂಟೇನ್ ಡ್ಯೂ ಕುಡಿದು ಬೆಟ್ಟದ ಮೇಲಿಂದ ಜಿಗಿದರೂ ನೀವು ಸಾಯುವುದಿಲ್ಲ.
- ಡೈರಿ ಮಿಲ್ಕ್ ಚಾಕಲೇಟ್ ಅನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಮುಖಕ್ಕೆ ಹಚ್ಚಿಕೊಳ್ಳಬೇಕು.
- ಹಣ್ಣಿನ ಅಂಗಡಿಗಿಂತಲೂ ಜಾಸ್ತಿ ಹಣ್ಣುಗಳು ನಿಮ್ಮ ಶಾಂಪೂನಲ್ಲಿರುತ್ತವೆ.
- ನಿಮ್ಮ ಮಗು ಬೋರ್ನ್ವೀಟಾ ಕುಡಿಯಲಿಲ್ಲವೆಂದರೆ ಅದು ಮುಂದೆ ದಡ್ಡ ಶಿಖಾಮಣಿಯಾಗುತ್ತದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.