ಕಚಗುಳಿ ಟ್ವೀಟ್ಸ್
ತನ್ನನ್ನು ಟೀಕಿಸಿದರೆಂಬ ಕಾರಣಕ್ಕೆ ತನ್ನ ಪ್ರಜೆಗಳನ್ನೆ ಟ್ವಿಟ್ಟರ್ನಲ್ಲಿ ಬ್ಲಾಕ್ ಮಾಡುವ, ತನ್ನ ಯೋಧರನ್ನು ಪಾಕಿಸ್ತಾನಿಗಳು ಕೊಂದಾಗ ಮಾತ್ರ ಸುಮ್ಮನಿರುವ ಪ್ರಧಾನಿಯನ್ನು ಹೊಂದಿರುವ ದೇಶ ನಮ್ಮದು.
-ಬಾಬು ಭಯ್ಯಾ
ಕಲೆಯೇ ನಾಗರಿಕತೆಯ ಕರೆನ್ಸಿ. ಹೀಗಾಗಿಯೇ ಮ್ಯೂಸಿಯಂ,ಗ್ರಂಥಾಲಯಗಳಲ್ಲಿ ಕಲೆಯನ್ನು ಕಾಪಿಡುತ್ತಾರೆಯೇ ಹೊರತು ಬ್ಯಾಂಕ್ ಬ್ಯಾಲೆನ್ಸ್ನಲ್ಲ.
-ಬೊಮ್ಮನ್ ಇರಾನಿ
ನಿಮಗೆ ಆಯ್ಕೆಗಳಿದ್ದರೆ ಅತ್ಯುತ್ತಮವಾದದ್ದನ್ನೇ ಆಯ್ದುಕೊಳ್ಳಿ. ಆಯ್ಕೆಗಳಿಲ್ಲದಿದ್ದರೆ ಅತ್ಯುತ್ತಮವಾದದ್ದನ್ನು ಮಾಡಿ!
-ಅನುಪಮ್ ಖೇರ್
ದೇವರು ಒಳ್ಳೆಯದನ್ನು ಹಾಗೂ ದೆವ್ವವು ಕೆಡುಕನ್ನು ಪ್ರತಿನಿಧಿಸುತ್ತದೆ ಎಂದಾದರೆ ಜಗತ್ತಿನಲ್ಲಿ ಕೆಟ್ಟದ್ದೇ ಹೆಚ್ಚು ನಡೆಯುವಾಗ ನಾವೇನಂದುಕೊಳ್ಳಬೇಕು? ದೆವ್ವ ಪರಿಶ್ರಮದಿಂದ ತನ್ನ ಕೆಲಸ ಮಾಡುತ್ತಿದೆ ಹಾಗೂ ದೇವರು ಆಲಸಿ ಬಿದ್ದಿದ್ದಾನೆ ಎಂದಲ್ಲವೇ?
-ರಾಮ್ಗೋಪಾಲ್ ವರ್ಮಾ