ಊರಿಗೆ ಬಂದವಳು ನೀರಿಗೆ ಬರಲೇಬೇಕಾ?
ಬರ್ಕಲಿರಾಮ ಕಿರಗಂದೂರು, ಮಂಡ್ಯ, 9008741348
ಊರಿಗೆ ಬಂದವಳು ನೀರಿಗೆ ಬರಲೇಬೇಕಾ?
ಗಾದೆ ಬದಲಾಗಿದೆ. ಊರಿಗೆ ಬಂದವಳು ಬಾರಿಗೆ ಬರದೇ ಇರ್ತಾಳಾ ಅಂತ.
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ಇಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎನ್ನುತ್ತಾರೆ. ಆದರೂ ದಾನ ಮಾಡುವುದಿಲ್ಲ ಏಕೆ?
ಬಚ್ಚಿಟ್ಟಿದ್ದು ಪರರಿಗೆ ಅಂದ ಮೇಲೆ ಮತ್ಯಾಕೆ ಹಂಚಬೇಕು ಅಂತ!
ಹೆಣ್ಣು ಜನ್ಮ ನೀಡಿದರೆ 'ಪುನರ್ಜನ್ಮ' ಪಡೆದಂತೆ. ಗಂಡು?
ಒಂದೇ ಜನ್ಮಕ್ಕೇ ಸುಸ್ತು.
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ನಿದ್ದೆ ವಂಚಿತನಿಗೆ ರಾತ್ರಿ ದೀರ್ಘವಂತೆ. ಪ್ರೀತಿ ವಂಚಿತನಿಗೆ?
ಜೀವನವೇ ದೀರ್ಘ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ವಾರಕ್ಕೆ ಏಳೇ ದಿನಗಳು ಏಕೆ?
ಯಾಕೆಂದರೆ ತಿಂಗಳಿಗೆ ನಾಲ್ಕೇ ವಾರಗಳು ಅದಿಕ್ಕೆ.
ಬಾಣಭಟ್ಟ