ಸ್ವೀಟಿ ಅಂತ ಕರೀತೀರಲ್ಲ. ಅವರಂದ್ರೆ ಅಷ್ಟೊಂದು ಪ್ರೀತೀನಾ?
ಯುವಕ: ಸರ್ ಇಷ್ಟು ವಯಸ್ಸಾದರೂ ಕೂಡ ನೀವು ನಿಮ್ಮ ಹೆಂಡತಿಯನ್ನು ಡಾರ್ಲಿಂಗ್, ಸ್ವೀಟಿ ಅಂತ ಕರೀತೀರಲ್ಲ. ಅವರಂದ್ರೆ ಅಷ್ಟೊಂದು ಪ್ರೀತೀನಾ?
ಮುದುಕ: ಪ್ರೀತೀನೂ ಇಲ್ಲ, ಸುಡುಗಾಡೂ ಇಲ್ಲ. ಅದೇನಂದ್ರೆ 5 ವರ್ಷದ ಹಿಂದೇನೇ ಅವಳ ಹೆಸರನ್ನ ಮರೆತುಬಿಟ್ಟಿದೀನಿ. ಗೊತ್ತಾದ್ರೆ ಬೈತಾಳೆ!
-----
ಹೆಂಗಸೊಬ್ಬಳು ಭಿಕ್ಷೆ ಬೇಡಿತ್ತಿದ್ದಳು: ಸರ್ ಒಂದು ರುಪಾಯಿ ಕೊಡಿ ಮೂರು ದಿನದಿಂದ ಊಟ ಮಾಡಿಲ್ಲ.
ವ್ಯಕ್ತಿ: ಮೂರು ದಿನದಿಂದ ಊಟ ಮಾಡಿಲ್ಲಾ ಅಂತೀಯ. ಒಂದು ರುಪಾಯಿ ತೊಗೊಂಡು ಏನ್ಮಾಡ್ತೀಯಾ?
ಹೆಂಗಸು: ವೇಟ್ ಎಷ್ಟು ಕಡಿಮೆ ಆಗಿದೇನೋ ಚೆಕ್ ಮಾಡ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.