ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆಯಲು ಕಾರಣ?
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆಯಲು ಕಾರಣ?
ತಲೆನೋವು ಬಂದ್ರೆ ಬಾಯಲ್ಲಿ ಗುಳಿಗೆ ತಗೊಳೊಲ್ವೇ!
ತಲವಾಟ ಮಂಜುನಾಥ, ಸಾಗರ, 9480931611
ಚೂಡಿದಾರಕ್ಕೂ, ಮೂಗುದಾರಕ್ಕೂ ಇರುವ ವ್ಯತ್ಯಾಸವೇನು?
ಮೂಗುದಾರ ಬಿದ್ದಮೇಲೆಯೇ ಚೂಡಿದಾರ ಮುಟ್ಟುವ ಪರ್ಮಿಷನ್ ಸಿಗೋದು.
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ಸ್ನೇಹ ಒಂದು ಸಂಬಂಧ. ಹಾಗಾದರೆ ಪ್ರೀತಿ ಏನು?
ಕೆಲವೊಮ್ಮೆ ಅಕ್ರಮ ಸಂಬಂಧ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಕೆಲವು ಹುಡುಗಿಯರು ತಮ್ಮ ಬಿಳುಪಾದ ಹಲ್ಲುಗಳು ಕಾಣಲೆಂದೇ ಸದಾ ನಗುತ್ತಿರುತ್ತಾರಲ್ಲ?
ಹಸಿ ತೊ ಪಸಿ ಅಂತ ಹೇಳ್ಕೊಂಡು ನೀವು ಹುಡುಗರು ಖುಷಿ ಪಡ್ಲಿ ಅಂತ.
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಹೆಂಗಸರೊಂದಿಗೆ 'ಗೆಳೆತನ' ಸಮಾಜದ ವಕ್ರದೃಷ್ಟಿಗೆ, ಅಪವಾದಕ್ಕೆ ಕಾರಣವಂತೆ?
ಕೇವಲ ಗಂಡಸರೊಂದಿಗೇ ಗೆಳೆತನ ಇದ್ದರೂ ಅನುಮಾನ ಪಡುವವರಿದ್ದಾರೆ.
ಬಾಣಭಟ್ಟ