ಬ್ಯಾಡ ಅಂದ್ರೂ ನಿನಗೆ ಮೈಸೂರು ಸಿಲ್ಕ್ ಸೀರೆ ಕೊಟ್ಟೇ ಕೊಡಿಸ್ತೀನಿ...
ಎಸ್.ಆರ್. ಅನುಷಾ, ತಿಂಡ್ಲು, ಬೆಂಗಳೂರು
ಬ್ಯಾಡ ಅಂದ್ರೂ ನಿನಗೆ ಮೈಸೂರು ಸಿಲ್ಕ್ ಸೀರೆ ಕೊಟ್ಟೇ ಕೊಡಿಸ್ತೀನಿ ಅಂತ ಯಜಮಾನ್ರುರಚ್ಚೆ ಹಿಡಿದಿದ್ದಾರಲ್ಲ. ಏನಿರಬಹುದು?
'ಸಿಲ್ಕ್' ಸಿನಿಮಾ ನೋಡಿದ ಪ್ರಭಾವ!
ಎಸ್. ರಾಘವೇಂದ್ರ, ಕೃಷ್ಣಮೂರ್ತಿಪುರಂ, ಮೈಸೂರು
'ಮಧ್ಯಾಹ್ನದ ಬಿಸಿಯೂಟ' ಅಂತ ಅಪ್ಪಟ ಕನ್ನಡದಲ್ಲಿ ಕರೆದು 'ಕ್ಷೀರ ಭಾಗ್ಯ' ಅಂತ ಸಂಸ್ಕೃತಕ್ಕೆ ಯಾಕೆ ಜೋತುಬಿದ್ದರು?
ರಾಜಕಾರಣಿಗಳು ಕೂಡ ಸುಸಂಸ್ಕೃತರಾಗುತ್ತಿರುವ ಲಕ್ಷಣ!
ರಾಗು, ಮೈಸೂರು,
ನಲ್ಲೆ ನೆನಪು ರಾತ್ರಿ ಹೊತ್ತಲ್ಲೇ ಕಾಡುತ್ತಲ್ಲ. ಯಾಕಿರಬಹುದು?
ಭೂತ-ಪ್ರೇತಗಳ ಕಾಟ ಇರೋದೂ ರಾತ್ರಿನೇ.
ರಾಗು, ಮೈಸೂರು,
ನಲ್ಲೆ ನೆನಪು ರಾತ್ರಿ ಹೊತ್ತಲ್ಲೇ ಕಾಡುತ್ತಲ್ಲ. ಯಾಕಿರಬಹುದು?
ಭೂತ-ಪ್ರೇತಗಳ ಕಾಟ ಇರೋದೂ ರಾತ್ರಿನೇ.
ಅತುಲ್ ಭಾರದ್ವಾಜ, ಕೃಷ್ಣಮೂರ್ತಿಪುರಂ, ಮೈಸೂರು
ವಯಸು, ಸೊಗಸು ಎರಡಿದ್ದರೆ ಸಾಕೇ ಪ್ರೀತಿಸಲು?
ಹುಡುಗಿಯೂ ಬೇಕಲ್ಲ.
ಬಾಣಭಟ್ಟ