ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೇರಳ ನಮಗೆ ಮಾದರಿಯಾಗಲಿ

Mainashree
Updated On : 14 Aug 2013, 11:24 am

ಕೇರಳ ರಾಜ್ಯದಲ್ಲಿ ಸಣ್ಣ ಪುಟ್ಟ ಹಳ್ಳಿಗಳಿಂದ ಹಿಡಿದು ದೊಡ್ಡ ಮತ್ತು ಅತಿ ದೊಡ್ಡ ನಗರಗಳಲ್ಲಿನ ರಸ್ತೆಗಳ ನಿರ್ವಹಣೆ ಅಚ್ಚುಕಟ್ಟಾಗಿರುತ್ತದೆ. ಯಾವುದೇ ಕಾಲದಲ್ಲಿಯೂ ಯಾವ ರಸ್ತೆಯಲ್ಲಿಯೂ ಸಣ್ಣಪುಟ್ಟ ಗುಂಡಿಗಳಾಗಲೀ ಹಾಳಾದ ರಸ್ತೆಗಳಾಗಲೀ ಎಲ್ಲಿಯೂ ಕಾಣುವುದಿಲ್ಲ. ಶಬರಿಮಲೆ ಯಾತ್ರೆಗೆ ಹೊರಡುವ ಯಾತ್ರಾರ್ಥಿಗಳು ಇದನ್ನು ಗಮನಿಸಿರುತ್ತೇವೆ. ಎಂತಹ ದೊಡ್ಡ ಪ್ರಮಾಣದ ಮಳೆ ಬಂದರೂ ಸಹ ರಸ್ತೆಗಳಲ್ಲಿ ನೀರು ನಿಲ್ಲುವುದಿಲ್ಲ. ರಸ್ತೆ ಹಾಳಾಗುವುದಿಲ್ಲ. ಮಳೆ ಬಂದೀತೆಂದು ನಮ್ಮ ಬಿ.ಬಿ.ಎಂ.ಪಿ.ಯವರಂತೆ ಯಾವ ಹೆಲ್ಪ್ಲೈನ್ಗಳ ಆವಶ್ಯಕತೆ ಇರುವುದಿಲ್ಲ. ಕೇರಳದ ಅನೇಕ ಪ್ರದೇಶಗಳಲ್ಲಿ ನಮ್ಮ ರಾಜ್ಯದ ಕರಾವಳಿ ಪ್ರದೇಶದಷ್ಟೆ ಅಥವಾ ಇನ್ನೂ ಹೆಚ್ಚಾಗಿ ಮಳೆ ಬೀಳುತ್ತಲೇ ಇರುತ್ತದೆ. ಆದರೂ ಅಲ್ಲಿನ ರಸ್ತೆಗಳು ಯಾವ ಋತುವಿನಲ್ಲೂ ಹಾಳಾಗಿರುವುದಿಲ್ಲ. ಆದುದರಿಂದ ಮಾನ್ಯ ಲೋಕೋಪಯೋಗಿ ಸಚಿವರು ಕೇರಳ ರಾಜ್ಯಕ್ಕೆ ಒಂದು ತಜ್ಞರ ತಂಡವನ್ನು ಕಳುಹಿಸಿ ಅವರು ರಸ್ತೆಗೆ ಬಳಸುವ ಡಾಂಬರು, ರಸ್ತೆಗಳ ನಿರ್ಮಾಣಕ್ಕೆ ಅನುಸರಿಸುವ ಮಾರ್ಗ, ವಿನ್ಯಾಸ ಇವುಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ಪಡೆದು ಮಳೆ ಬಂದಾಗ ರಸ್ತೆಯ ಮೇಲೆ ನೀರು ನಿಲ್ಲುವ ರಸ್ತೆಗಳು ನೀರು ಹರಿಯಲಾಗದ ರಸ್ತೆಯ ಚರಂಡಿಗಳು ಗುಂಡಿಗಳಿಗೆ ತೇಪೆ ಹಾಕುವ ಕೆಲಸ ಯುದ್ಧಕಾಲೆ ಶಸ್ತ್ರಾಭ್ಯಾಸ ಎಂಬಂತೆ ಶಿರಾಡಿಫಾಟ್ ಮುಂತಾದ ಪ್ರದೇಶಗಳಲ್ಲಿ ಮಳೆಗಾಲ ಬಂತೆಂದು ರಸ್ತೆ ರಿಪೇರಿ ಮಾಡುವ ದುಂದುವೆಚ್ಚದ ಯೋಜನೆಗಳಿಗೆ ಮುಂದೆಯಾದರೂ ಕಡಿವಾಣ ಹಾಕಿ. ಕೇರಳ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆ ಮತ್ತು ಭೂಮಿಯ ಒಡೆತನವನ್ನು ಯಾವ ರೀತಿಯಲ್ಲಿ ಕಾಪಾಡಿಕೊಳ್ಳುತ್ತಾರೆ. ಸ್ಥಳೀಯ ಜನರ ಹಿತವನ್ನು ಯಾವ ರೀತಿಯಲ್ಲಿ ಕಾಯುತ್ತಾರೆ ಎನ್ನುವುದನ್ನು ನೋಡಿ ತಿಳಿಯಬೇಕು. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರ ಸೇರಿದಂತೆ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ಭೂಮಿಯ ಒಡೆತನ ಶಿಕ್ಷಣದ ನೆಪದಲ್ಲಿ, ಕೈಗಾರಿಕೆಯ ನೆಪದಲ್ಲಿ, ಉದ್ಯೋಗದ ನೆಪದಲ್ಲಿ, ಅಭಿವೃದ್ಧಿಯ ನೆಪದಲ್ಲಿ ಅನ್ಯ ಭಾಷೆಯವರ ಪಾಲಾಗುತ್ತಿದೆ. ಕನ್ನಡಿಗರು ಭೂಮಿ ಒಡೆತನವನ್ನು ಕಳೆದುಕೊಂಡು ಅನ್ಯ ಭಾಷೆಯವರು ನಿರ್ಮಿಸುವ ಕಾರ್ಖಾನೆಗಳಲ್ಲಿ, ಕಟ್ಟಡಗಳಲ್ಲಿ, ಸಂಸ್ಥೆಗಳಲ್ಲಿ ಕೆಲಸ ಆಳುಗಳಾಗಿ ದುಡಿಯುತ್ತಿದ್ದೇವೆ. ಅನ್ಯರ ಭಾಷೆಯನ್ನು ಮಾತಾಡುವ ಮತ್ತು ಪ್ರೀತಿಸುವ ಜನರು ಕಡಿಮೆಯಾಗುತ್ತಿದ್ದಾರೆ. ನಮ್ಮ ಭಾಷೆಯನ್ನು ಮಾತನಾಡುವ ವ್ಯಕ್ತಿ, ಸಂಸ್ಥೆಗಳ ವಿಚಾರದಲ್ಲಿ ಅನ್ಯಾಯವಾದಾಗ ಒಗ್ಗಟ್ಟು ಪ್ರದರ್ಶಿಸದೆ ಅಲ್ಲಿಯೂ ನಾವು ಸ್ವಾರ್ಥಕ್ಕೆ ಬಲಿಯಾಗಿ ನಮ್ಮವರನ್ನೇ ಅನೇಕ ಸಂದರ್ಭಗಳಲ್ಲಿ ಬಿಟ್ಟು ಕೊಡುತ್ತಿದ್ದೇವೆ. ಕೆಲಸವನ್ನು ಕೊಡುವ ವಿಚಾರದಲ್ಲಿ ಕಾರ್ಖಾನೆಗೆ ಭೂಮಿಯನ್ನು ಕೊಡುವ ವಿಚಾರದಲ್ಲಿ ಎಲ್ಲದರಲ್ಲೂ ನಮ್ಮರಿಗೆ ಆದ್ಯತೆ ಕೊಡುವುದೇ ಇಲ್ಲ.
-ಕೆ.ಎಸ್. ನಾಗರಾಜು, ಬೆಂಗಳೂರು.
ಬಡ್ಡಿ ದರದ ಮಾಹಿತಿ ನೀಡಿ
ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ದರ ಎಲ್ಲಾ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಒಂದೇ ರೀತಿಯಿಲ್ಲ, ಬ್ಯಾಂಕಿನಿಂದ ಬ್ಯಾಂಕಿಗೆ ಬಡ್ಡಿದರ ಬದಲಾಗುತ್ತದೆ. ಮುಂಬೈ ಮೂಲದ ಒಂದು ಬ್ಯಾಂಕಿನಲ್ಲಂತೂ ಹೆಣ್ಣು ಮಕ್ಕಳ ಶೈಕ್ಷಣಿಕ ಸಾಲಕ್ಕೆ ಗಂಡು ಮಕ್ಕಳ ಶೈಕ್ಷಣಿಕ ಸಾಲಕ್ಕಿಂತ ಶೇಕಡಾ ಒಂದರಷ್ಟು ಕಡಿಮೆ ಬಡ್ಡಿ ದರವಿದೆ. (ಆದರೆ ಆ ಬ್ಯಾಂಕಿನ ಶಾಖೆಗಳು ಕರ್ನಾಟಕದಲ್ಲಿ ತುಂಬಾ ವಿರಳ ಮತ್ತೂ ಅವರ ಸಿಬ್ಬಂದಿಯೆಲ್ಲಾ ಕನ್ನಡ ಬಾರದ ಹೊರ ರಾಜ್ಯದವರು. ಹಾಗಾಗಿ ಕನ್ನಡಿಗ ವಿದ್ಯಾರ್ಥಿಗಳಿಗೆ  ಆ ಬ್ಯಾಂಕು ಉಪಯೋಗವಿಲ್ಲ ). ಅದಕ್ಕಾಗಿ  ಪ್ರಮುಖ ದಿನ ಪತ್ರಿಕೆಗಳು ಎಲ್ಲ ಬ್ಯಾಂಕುಗಳ  ಶೈಕ್ಷಣಿಕ ಸಾಲದ ಬಡ್ಡಿ ದರದ ತುಲನಾತ್ಮಕ ಕೊಷ್ಟಕವನ್ನು   ಹಾಗೂ ಈ ಬಡ್ಡಿ ದರದಲ್ಲಿ ವಿದ್ಯಾರ್ಥಿಯ ಕೊರ್ಸು ಮುಗಿದಾಗ ಅವನ ಮೇಲೆ ಬೀಳಬಹುದಾದ ಲಕ್ಷಾಂತರ ಬಡ್ಡಿ ದರದ ಭಾರ ಎಷ್ಟು ಹೆಚ್ಚು-ಕಡಿಮೆಯಾಗಬಹುದೆಂಬ ಕೋಷ್ಟಕ ಪ್ರಕಟಿಸಿದರೆ ವಿದ್ಯಾರ್ಥಿಗಳು ಮತ್ತೂ ಪಾಲಕರು ಅದನ್ನು ಅಭ್ಯಸಿಸಿ ತಮ್ಮ  ಬಡ್ಡಿ ಹಣ ಉಳಿಸಲು ಸರಿಯಾದ ಬ್ಯಾಂಕನ್ನು  ಆರಿಸಿಕೊಂಡು ಭವಿಷ್ಯದಲ್ಲಿ ತಮ್ಮ  ಮೇಲೆ ಬೀಳಬಹುದಾದ  ಲಕ್ಷಾಂತರ ರುಪಾಯಿಯ ಅಧಿಕ ಭಾರವನ್ನು ಕಡಿಮೆ ಮಾಡಿಕೊಳ್ಳಲು  ಸಹಾಯವಾಗಬಹುದು.
 -ರವಿ.ಬಿ. ಶೇಣವ, ಮಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement