ದಿನವಿಡೀ ಪರಸ್ಪರ ಜಗಳವಾಡುವ ಗಂಡ-ಹೆಂಡತಿಯರು ರಾತ್ರಿ...
ಮೊಗ್ಗಳ್ಳಿ ಗುರು, 9480931442
ದಿನವಿಡೀ ಪರಸ್ಪರ ಜಗಳವಾಡುವ ಗಂಡ-ಹೆಂಡತಿಯರು ರಾತ್ರಿ ಮಾತ್ರ ಗಪುಚುಪ್ ಆಗಿ ಒಂದಾಗುತ್ತಾರಲ್ಲ ಏನಿರಬಹುದು?
ಅದೇ ಸಂಸಾರದ ಗುಟ್ಟು.
ಜಗದೀಶ ಬೆಳಗಾವಿ, 8722444410
ಹಿರಿಯರು ಮಾಡಿದ ಮದುವೆಗೂ, ಪ್ರೀತಿಸಿ ಆದ ಮದುವೆಗೂ ಏನು ವ್ಯತ್ಯಾಸ?
ಮದುವೆ ಹೇಗೇ ಆದರೂ ನಂತರದ್ದು
ಒಂದೇ ರೀತಿ!
ದುಷ್ಟ ಪ್ರಾಣಿಗೂ ದುಷ್ಟ ವ್ಯಕ್ತಿಗೂ ವ್ಯತ್ಯಾಸವೇನು?
ಪ್ರಾಣಿಗಳು ಉದ್ದೇಶಪೂರ್ವಕವಾಗಿ ದುಷ್ಟವಾಗಿರುವುದಿಲ್ಲ. ಆದರೆ ಮನುಷ್ಯನ ಉದ್ದೇಶವೇ ದುಷ್ಟವಾಗಿರಬಲ್ಲದು.
ಚಿರಾಯು, ಮೈಸೂರು, 9886030677
ರಾಜಕಾರಣಿಗಳಿಗೆ ಬೋಳುತಲೆ ಕಡ್ಡಾಯಗೊಳಿಸಿದರೆ ಹೇಗೆ?
ವಿಗ್ ಕಂಪನಿಗಳಿಗೆ ಲಾಸ್ ಆಗುತ್ತೆ!
ತಲವಾಟ ಮಂಜು, ಸಾಗರ
ಬಾಸ್ ಇರದ ಆಫೀಸು, ಹೆಂಡತಿ ಇಲ್ಲದ ಸಂಸಾರ ಇವೆರಡು?
ಸಸಾರ!
ಬಾಣಭಟ್ಟ