ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಚಂದಿರನಿಲ್ಲದ ಬಾನಿನಲ್ಲಿ ಬೆಳದಿಂಗಳು ಕಾಣಲು ಬಯಸಿದ್ದಾಳಲ್ಲ?

Rashmi Kasaragodu
Updated On : 15 Aug 2013, 11:22 am

ವಿ. ಹೇಮಂತಕುಮಾರ, ಬೆಂಗಳೂರು, 9035992900
ಚಂದಿರನಿಲ್ಲದ ಬಾನಿನಲ್ಲಿ ಬೆಳದಿಂಗಳು ಕಾಣಲು ಬಯಸಿದ್ದಾಳಲ್ಲ?
ಅವಳು ಮೊಡವೇ ಇಲ್ಲದ ಊರಿನಲ್ಲಿ ಮಳೆ ಬಯಸಿದರೂ ಅಚ್ಚರಿಯಿಲ್ಲ.


ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಅಪ್ಪಿಕೊಳ್ಳೋದ್ರಲ್ಲಿ ಇರೋ ಸುಖ ಪಪ್ಪಿ ಕೊಡೋದ್ರಲ್ಲಿ ಇರಲ್ವಲ್ಲ ಯಾಕೆ ಭಟ್ರೇ?
ಅಪ್ಪಿಕೊಂಡಾಗ ತುಟಿಯಲ್ಲಿ ಜೇನಿದೆ ಎಂಬ ಭ್ರಮೆಯಿರುತ್ತದೆ. ಪಪ್ಪಿ ಕೊಟ್ಟಾಗ ಬರೀ ಎಂಜಲು ಎಂದು ಗೊತ್ತಾಗಿ ಭ್ರಮೆ ಕಳಚುತ್ತದೆ!



ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಹುಡುಗಿಯನ್ನು ಸ್ವೀಟ್ ಸಿಕ್ಸ್ಟೀನ್ ಅನ್ನುವಂತೆ ಹುಡುಗರನ್ನು?
ಯಂಗ್ ಅಟ್ ಸಿಕ್ಸ್ಟಿ!


ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ರಂಜಾನ್‌ನ 'ರೋಜಾ'ಕ್ಕೂ ಏಕಾದಶಿ ಉಪವಾಸಕ್ಕೂ ಇರುವ ಭಿನ್ನತೆ ಏನು?
ಒಂದು ಇಯರ್ಲಿ ಸಿಸ್ಟಂ, ಇನ್ನೊಂದು ಮಂತ್ಲಿ!



ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮಾತು ಜಾಸ್ತಿ, ಕೆಲಸ ಕಡಿಮೆ ಮಾಡೋರಿಗೆ ಏನಂತ ಕರೀಬೇಕು?
ದಿಗ್ವಿಜಯ್ ಸಿಂಗ್!

 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement