ಪೆಟ್ರೋಲ್ ಇಲ್ಲದ ಗಾಡಿಗೂ, ಪ್ರೀತಿ ಇಲ್ಲದ ಬಾಡಿಗೂ ವ್ಯತ್ಯಾಸವೇನು?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಪೆಟ್ರೋಲ್ ಇಲ್ಲದ ಗಾಡಿಗೂ, ಪ್ರೀತಿ ಇಲ್ಲದ ಬಾಡಿಗೂ ವ್ಯತ್ಯಾಸವೇನು?
ಕರೆಂಟಿಲ್ಲದ ಫ್ಯಾನಿಗೂ, ಬೋಳುತಲೆ ಹೇನಿಗೂ ಇರುವಷ್ಟೇ ವ್ಯತ್ಯಾಸ!
ಮೊಗ್ಗಳ್ಳಿ ಗುರು, ಬನವಾಸಿ, 9480931442
ಪ್ರೇಮದ ಕೊನೆಯ ಆನಂದ ಯಾವುದು?
ಮದುವೆ!
ಮೊಗ್ಗಳ್ಳಿ ಗುರು, ಬನವಾಸಿ
ಮಮ್ಮಿ ಕಟ್ಟೋದು ಗೊತ್ತು. ಡ್ಯಾಡಿ ಅಂತ ಯಾಕೆ ಸಮಾಧಿ ಕಟ್ಟಲ್ಲ. ಇದರ ರಹಸ್ಯವೇನು?
ಯಾಕೆಂದರೆ ಅಮ್ಮ ಮಾತ್ರ ಸತ್ಯ. ಅಪ್ಪ ನಂಬಿಕೆ ಮಾತ್ರ!
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ನೀ ಬಂದರೆ ಮೆಲ್ಲಗೆ... ಅನ್ನುತ್ತಾಳೆ.ಜೋರಾಗಿ ಹೋದರೆ?
ಬೋರಾಗಿ ಹೋಗುವ ಅಪಾಯವಿದೆ.
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಬಹುತೇಕ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂಜರಿಯಲು ಕಾರಣವೇನು?
ಹಿತ್ತಲಗಿಡ ಮದ್ದಲ್ಲ ಎಂಬ ನಂಬಿಕೆ.
-ಬಾಣಭಟ್ಟ