ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 18 Aug 2013, 10:45 am

ಹೊನ್ನಾವರದಿಂದ ಶಂಕರನಾರಾಯಣ ಭಟ್ ಬರೆಯುತ್ತಾರೆ. 'ಕೆಲವು ಶಬ್ದಗಳ ಸ್ಪೆಲ್ಲಿಂಗ್ ತಪ್ಪಿದ್ದರೂ ಅರಿವಿಲ್ಲದೇ ಅವುಗಳನ್ನು ನಾವು ಹಲವುಸಲ ಸರಿಯಾಗಿಯೆ ಅರ್ಥೈಸುತ್ತೇವೆ ಎಂಬುದನ್ನು ತಮ್ಮ ಲೇಖನದಲ್ಲಿ ಹಿಂದೊಮ್ಮೆ ಪ್ರಕಟಿಸಿದ್ದೀರಿ. ಅದೇ ರೀತಿ ಜು.18ರ ಪುಟ 5ರಲ್ಲಿ 'ಅಕ್ರಮ ಆರೋಪ: ವಿಟಿಯು ನೇಮಕ ಪ್ರಕ್ರಿಯೆ ಮುಂದೂಡಿಕೆ' ಶೀರ್ಷಿಕೆಯ ಸುದ್ದಿ ಪ್ರಕಟವಾಗಿದೆ. ಡಾ.ಶಿವಯೋಗಿಸ್ವಾವುಯವರ ಹೇಳಿಕೆಯಲ್ಲಿ 'ಮಹೇಶಪ್ಪ ನೇಕಮದಲ್ಲಿ' ಅಂತ ಬರೆದಿದೆ. ಮೊದಲಿಗೆ ಓದುವಾಗ ಅದನ್ನು ನೇಮಕ ಅಂತಲೆ ಓದಿಕೊಂಡು ಹೋಗಿದ್ದೆ. ಯಾಕೋ ಇನ್ನೊಮ್ಮೆ ನೋಡಿದಾಗ ತಪ್ಪಾಗಿರುವುದು ಕಂಡುಂಬತು.'
'ಅದೇ ವರದಿಯ ಮೊದಲನೆ ಸಾಲು 'ಅಕ್ರಮದ ಆರೋಪ ಕೇಳಿದ ಬಂದಿರುವ', ಎರಡನೇ ಪ್ಯಾರಾ 'ನೇಮಕ ಪ್ರಕ್ರಿಯೆದಲ್ಲಿ', 4ನೇ ಪ್ಯಾರಾ 'ರಮೇಶ ಗೌಡ ಹಾಗೂ ಬಳ್ಳಾರಿ ಎಂಬುವರು', 5ನೇ ಪ್ಯಾರಾ 'ಜೆಡಿಎಸ್‌ನ ಬಸವರಾಜ ಹೊರಟ್ಟಿ, ಮಹೇಶಪ್ಪ ಪೇಮೆಂಟ್ ವಿಸಿ' ಅಂತ ಬರೆಯಲಾಗಿದೆ. ಇದರರ್ಥವೇನು? ಇನ್ನು ಕೊನೆಯ ಸಾಲಿನಲ್ಲಿ ಮತ್ತೆ 'ನೇಮಕ ಪ್ರಕ್ರಿಯೆದಲ್ಲಿ' ಎಂದು ಪ್ರಕಟಿಸಲಾಗಿದೆ.'
ಇನ್ನು ಮುಖಪುಟದಲ್ಲಿ 'ಮರಳು ನೀತಿ' ತಲೆಬರಹದ ಮೊದಲನೇ ಪ್ಯಾರಾನಲ್ಲಿ 'ಎಲ್ಲದಕ್ಕೂ ಅನುಮೋದನೆ ಸಿಕ್ಕದೆ', 2ನೇ ಪುಟದ 'ಇಂಗ್ಲೀಷ್ ಮಾಧ್ಯಮ' ಸುದ್ದಿಯಲ್ಲಿ 'ತಮಗಿಂತ ತಡಿಮೆ ಅರ್ಹತೆಯಿರುವರನ್ನು', ಪುಟ 3ರಲ್ಲಿ  'ರಸ್ತೆಗಳ ಅಭಿವೃದ್ಧಿಗೆ ವಿಶೇಷ ನೀಡುವಂತೆ ಒತ್ತಾಯ' ಎಂದು ಬರೆದು ಶೀರ್ಷಿಕೆಯಲ್ಲಿಯೇ ತಪ್ಪು ಮಾಡಲಾಗಿದೆ.'
'ಪುಟ5ರಲ್ಲಿ 'ಮದನಿ ವಿರುದ್ಧ....' ಶೀರ್ಷಿಕೆ ಸುದ್ದಿಯ 3ನೇ ಪ್ಯಾರಾನಲ್ಲಿ 'ಮದನಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ, ಹೀಗಾಗಿ ಪ್ರಕರಣವನ್ನು ಕೋರ್ಟ್ ತೀರ್ಮಾನಮಾಡುತ್ತದೆ' ಎಂದು ಬರೆಯಲಾಗಿದೆ. ಇನ್ನು 'ಸಾಲ ಮಾಡಿ ಮನೆಗೆ.....' ತಲೆಬರಹದ ಸುದ್ದಿಯ 7ನೇ ಪ್ಯಾರಾನಲ್ಲಿ 'ಪೌಡರ್‌ಗೆ ಬೇಡಿಕೆ ಇಲ್ಲದಿದಂದರು...', 8ನೇ ಪ್ಯಾರಾದ ಕೊನೆಯ ಸಾಲು 'ಇಲ್ಲಿ ಇಲ್ಲ ಎಂದಾದ ಮೇಲೆ ಬೇರೆಡೆಯಿಂದ ಖರೀಸಿ ಎಂದರು', 9 ನೇ ಪ್ಯಾರಾನಲ್ಲಿ 'ಸಕ್ಕರೆ, ಗೋದಿ ನೀಡುವುದಿಲ್ಲ ಎಂದಾದರ ಅದನ್ನು ಘೋಷಿಸಿಬಿಡಿ' ಎಂದು ಬರೆದಿದ್ದಾರೆ' ಎಂದು ಅಕ್ಷರ ದೋಷಗಳ ಪಟ್ಟಿಯನ್ನೇ ಶಂಕರನಾರಾಯಣ ಭಟ್ ನೀಡಿದ್ದಾರೆ.
ಈ ಅಕ್ಷರ ದೋಷಗಳನ್ನು ಕೇವಲ ಮುದ್ರಾ ರಾಕ್ಷಸನ ಹಾವಳಿ ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ವರದಿಗಾರರು ಹಾಗೂ ಉಪಸಂಪಾದಕರ ಕಣ್ತಪ್ಪಿನಿಂದ ಆಗಿರುವ ಪ್ರಮಾದಗಳಿವು. ಒಂದೇ ಸುದ್ದಿ ಹಾಗೂ ಪುಟದಲ್ಲಿ ಇಷ್ಟೊಂದು ಪ್ರಮಾಣದ ತಪ್ಪುಗಳಿರುವುದು ಒಳ್ಳೆಯದಲ್ಲ.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement