ಮನೆಗೆ ಬಂದ ತಕ್ಷಣ ಹೆಂಡತಿ ಮುತ್ತುಕೊಡುತ್ತಾಳೆ ...
ಮನೆಗೆ ಬಂದ ತಕ್ಷಣ ಹೆಂಡತಿ ಮುತ್ತುಕೊಡುತ್ತಾಳೆ ಅಂದರೆ ಅದರರ್ಥ ಏನಿರಬಹುದು ಭಟ್ರೆ?
ಕುಡಿದು ಬಂದಿರಬಹುದಾ ಎನ್ನುವುದನ್ನು ಪತ್ತೆ ಹಚ್ಚುವ ವಿಧಾನವೂ ಇರಬಹುದು!
ರಮೇಶ್ ಭಟ್ ಆವರ್ಸೆ, ಕುಂದಾಪುರ, 9164276058
ಜೆ.ಪಿ. ನಾಗರಾಜ್, ದಾವಣಗೆರೆ, 9901193811
ಎಲ್ಲಾ ಕಡೆ ಬಾಂಬ್ ದಾಳಿ ಹೆಚ್ಚಾಗುತ್ತಿದೆಯಲ್ಲ ಯಾಕೆ?
ಮಾನವ ಮುಂದೋಡುವ ಭರದಲ್ಲಿ, ಮಾನವೀಯತೆಯನ್ನು ಹಿಂದೆ ಬಿಟ್ಟಿದ್ದರ ಪರಿಣಾಮವಿದು.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಂದೊಮ್ಮೆ ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಿರ್ಮೂಲನೆಯಾಗಿದ್ದರೆ ಏನಾಗ್ತಿತ್ತು?
ರಾಜಕಾರಣಿಗಳು ಅದಕ್ಕೆ ಪರ್ಯಾಯವಾದ ವ್ಯವಸ್ಥೆಯನ್ನು ಹೇಗಾದರೂ ಮಾಡಿ ಹುಟ್ಟುಹಾಕುತ್ತಿದ್ದರು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮದುವೆ ಗಂಡಿಗೆ ವಾಚ್ ಕೊಡೋ ಕಾರಣವೇನು ಭಟ್ರೆ?
ಇಲ್ಲಿಂದ ನಿನ್ನ ಟೈಮ್ ಖರಾಬಾಗಲಿದೆ ಎನ್ನುವುದನ್ನು ನೆನಪು ಮಾಡಿಕೊಡಲು!
ಕಲಾವಿದ ಸೀನು, ಚಿತ್ರದುರ್ಗ, 9538641164
ಕೆಲವು ಹುಡುಗಿಯರು ಕೋಮಲವಾದ ಹೂವಿನಹೆಸರಿನವರಾಗಿದ್ರೂ, ಅವರ ಗುಣ ಅದಕ್ಕೆ ತದ್ವಿರುದ್ಧವಾಗಿರುತ್ತದಲ್ಲ ಯಾಕೆ?
ಕಲಾವಿದರೆಂದು ಕರೆದುಕೊಳ್ಳುವವರಿಗೆಲ್ಲ ಕಲೆ ಬಗ್ಗೆ ಗೊತ್ತಿರುತ್ತದೆಯೇ? ಇದೂ ಹಾಗೆಯೇ!
-ಬಾಣಭಟ್ಟ