ನಿಜಕ್ಕಿಂತ ಕಲ್ಪನೆಯೇ ಸುಂದರ!
ನಿಜಕ್ಕಿಂತ ಕಲ್ಪನೆಯೇ ಸುಂದರ!
ಪ್ರೀತಿಸುವಾಗ ಇರುವ ಮಜಾ ಮದುವೆಯಾದ ಮೇಲೆ ಇರುವುದಿಲ್ಲ ಏಕೆ?
ರವಿಕುಮಾರ ಜಿ.ಬಿ. 9449669897
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ನದಿಯೆಂಬ ಹೆಣ್ಣು ಸಾಗರವೆಂಬ ಗಂಡನ್ನು ಸೇರಲೇಬೇಕಲ್ಲವೇ?
ನದಿ ತಿರುಗಿಸುವ ಖತರ್ನಾಕ್ ಯೋಜನೆ ಜಾರಿ ಮಾಡುವವರೂ ಇದ್ದಾರೆ!
ತಲವಾಟ ಮಂಜು, ಸಾಗರ, 9480931611
ಯಮನಿಗೂ ಹೆದರದ ಗಂಡು ಹೆಂಡತಿಗೆ ಅಷ್ಟೊಂದು ಹೆದರುತ್ತಾನೆ?
ಯಮ ಒಂದೇ ಸಾರಿ ಕೊಲ್ಲುತ್ತಾನೆ.
ಲಕ್ಕೂರು ಎಂ. ನಾಗರಾಜ, ಮಾಲೂರು, 9900538954
ಮಳೆ ಹುಡುಗಿ ಪೂಜಾ ಗಾಂಧಿಯವರು ಮತ್ತೊಂದು ಪ್ರಾದೇಶಿಕ ಪಕ್ಷ ಕಟ್ಟುತ್ತಾರಂತೆ?
ಚುನಾವಣೆಗೆ ನಿಂತಿದ್ದಕ್ಕೇ ಅತಿವೃಷ್ಟಿ. ಪಕ್ಷ ಕಟ್ಟಿದರೆ ಪ್ರಳಯ ಗ್ಯಾರಂಟಿ.
ವಾದಿರಾಜ ಜಿ. ರಾಯ್ಕರ್, ಬೆಂಗಳೂರು
ರಾತ್ರಿ ಗಸ್ತು ಪೊಲೀಸರಿಗೆ ಬೈಕ್ ಬದಲು ಸೈಕಲ್ ಕೊಡ್ತಾರಂತೆ?
ಸೈಕಲ್‌ನಲ್ಲಿ ರಾತ್ರಿ ಗಸ್ತು, ಬೆಳಗಾಗೋ ಹೊತ್ಗೆ ಪೊಲೀಸ್ರು ಸುಸ್ತು.
-ಬಾಣಭಟ್ಟ