ಅವರ ಫ್ಯಾಷನ್ ಕೆಟ್ಟದಾಗಿದೆ ಎಂದು ವರ್ಣಿಸುವ ಮೂಲಕ!
ಅವರ ಫ್ಯಾಷನ್ ಕೆಟ್ಟದಾಗಿದೆ ಎಂದು ವರ್ಣಿಸುವ ಮೂಲಕ!
ಜತೆಯಲ್ಲಿ ಹೆಂಡತಿ ಇದ್ದಾಗ ಸುಂದರ ಚೆಲುವೆಯೊಬ್ಬಳು ಪಕ್ಕದಲ್ಲಿ ಬಂದು ನಿಂತರೆ ಅವಳನ್ನು
ಖಣ್ತುಂಬಾ ನೋಡುವುದು ಹೇಗೆ?
ಫ್ಯಾಷನ್ ಡಿಸೈನರ್ ಮಧು, 9945737427
ವಾದಿರಾಜ ಜಿ. ರಾಯ್ಕರ, ಬೆಂಗಳೂರು
ಹುಡುಗನಿಗೆ ಮೀಸೆ ಬರೋ ವಯಸ್ಸಲ್ಲಿ ಹುಡುಗಿಯರಿಗೆ ಆಸೆ ಮೂಡೋದ್ಯಾಕೆ?
ಅವರಿಗೆ ಆಸೆ ಮೂಡಿಲ್ಲವೆಂದರೆ ಈತನಿಗೆ ಮೂಡಿದ ಮೀಸೆ ವೇಸ್ಟ್ ಆಗುವುದರಿಂದ.
ವಾದಿರಾಜ ಜಿ. ರಾಯ್ಕರ, ಬೆಂಗಳೂರು
ಏನ್ರೀ ಭಟ್ರೇ ಕಂಡಕ್ಟರ್ ರಾಜುನ ಬಿಟ್ಬಿಟ್ಟು ಹೇಮಂತಕುಮಾರ್‌ನ ಹಿಡ್ಕೊಂಡ್‌ಬಿಟ್ಟಿದೀರಲ್ಲಾ?
ಬಸ್ ಇಳಿದ ಮೇಲೆ ಕಂಡಕ್ಟರ್ ಹಂಗೇನು.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹುಲಿ ಏಕೆ ಹುಲ್ಲು ತಿನ್ನುವುದಿಲ್ಲ?
ಹುಲ್ಲು ಕಡಿಮೆಯಾಗಿ ಜಿಂಕೆ ಸೊರಗಿದರೆ ಒಳ್ಳೆಯ ಮಾಂಸ ಸಿಗುವುದಿಲ್ಲ ಅಂತ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ವ್ಯಕ್ತಿಯೊಬ್ಬ ಸುಳ್ಳು ಹೇಳುತ್ತಿದ್ದರೆ 'ರೈಲು ಬಿಡುತ್ತಿದ್ದಾನೆ' ಎನ್ನುವುದೇಕೆ?
ಕೊಂಚ ಹಳಿ ತಪ್ಪಿದರೂ ಅಪಘಾತ ಗ್ಯಾರಂಟಿ ಅದಕ್ಕೆ.
-ಬಾಣಭಟ್ಟ