ಮತದಾನ ಮಾಡಿ ಅಭಿವೃದ್ಧಿ ಭಿಕ್ಷೆ ಬೇಡೋ ಜನಸಾಮಾನ್ಯರ...
ಮತದಾನ ಮಾಡಿ ಅಭಿವೃದ್ಧಿ ಭಿಕ್ಷೆ ಬೇಡೋ ಜನಸಾಮಾನ್ಯರ ಈ ಬವಣೆ ನಿಲ್ಲುವುದಾದರೂ ಎಂದು?
ಬಿಟ್ಟಿ ಕೊಡುಗೆ, ಜಾತಿಪ್ರೀತಿ ಬಿಟ್ಟು ಅಭಿವೃದ್ಧಿಯ ಬೇಡಿಕೆಯನ್ನೇ ಇಡುವ ಪ್ರಬುದ್ಧತೆ ಬಂದ ದಿನ ಖಂಡಿತ ಬವಣೆ ನೀಗಲಿದೆ.
ದೇಶವಳ್ಳಿ ಶಿವು, ಚಾಮರಾಜನಗರ, 9964720727
ರಮೇಶ್ಭಟ್ ಆವರ್ಸೆ, ಕುಂದಾಪುರ
ಭಕ್ತಾದಿಗಳು ಕಾಲು ತೊಳೆದುಕೊಂಡು ದೇವಸ್ಥಾನ ಪ್ರವೇಶಿಸಬೇಕು ಏಕೆ?
ಏನೂ ತೊಳೆದುಕೊಳ್ಳಲು ಇಷ್ಟ ಇಲ್ಲದವರು ಅಂಥ ಸ್ವಾತಂತ್ರ್ಯವನ್ನು ಅವರವರ ಮನೆಯಲ್ಲೇ ಆಚರಿಸುವ ಆಯ್ಕೆ ಇದೆ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು. ಹೆಂಡತಿ ಗುಲಾಮನಾಗುವ ತನಕ?
ತೃಪ್ತಿ ದೊರೆಯದು...
ವಿ. ಹೇಮಂತಕುಮಾರ, 9035992900
ನಾನು-ಅವಳು ನೋಡದೇ ಪ್ರೀತಿ ಮಾಡ್ತಿದೀವಿ? ನಮ್ಮ ಪ್ರೀತಿ ಗೆಲ್ಲುತ್ತಾ?
ನೋಡದೇ ಪ್ರೀತಿಸಿದರೆ ಗೆಲ್ಲುವ ಸಾಧ್ಯತೆ ಇರುವಷ್ಟೇ, ನೋಡಿದ ನಂತರ ಸೋಲುವ ಸಾಧ್ಯತೆಯೂ ಇದೆ.
ಕೆ. ವಿ. ಶಿವಕುಮಾರ್, ಹೆಚ್ಡಿ ಕೋಟೆ
ರಾಜಕೀಯ ರಂಗದಲ್ಲಿ ಯುಕ್ತಿ-ಶಕ್ತಿಯ ಜತೆಗೆ ಇನ್ನೇನು ಬೇಕು?
ಇವೆರಡರಲ್ಲಿ ಯಾವುದನ್ನು ಯಾವ ಸಂದರ್ಭದಲ್ಲಿ ಚಲಾಯಿಸಬೇಕು ಎಂಬ ತಿಳಿವಳಿಕೆ.
-ಬಾಣಭಟ್ಟ